ಈ ಆಪ್ಟಿಕಲ್ ಭ್ರಮೆ ಚಿತ್ರದಲ್ಲಿರುವ ಬೆಕ್ಕನ್ನು ಗುರುತಿಸಬಲ್ಲಿರಾ…? 06-07-2022 10:18AM IST / No Comments / Posted In: Latest News, Live News, International ಆಪ್ಟಿಕಲ್ ಭ್ರಮೆಗಳು ಅತ್ಯಂತ ಆಸಕ್ತಿದಾಯಕ ಮತ್ತು ಮೋಜಿನ ವಿಷಯವಾಗಿದೆ. ಇದನ್ನು ಪರಿಹರಿಸಲು ನಿಮಗೆ ಸ್ವಲ್ಪ ಕಷ್ಟವಾಗಬಹುದು. ಆದರೆ, ಇದು ಬಹಳ ಇಂಟ್ರೆಸ್ಟಿಂಗ್ ಆಗಿ ಇರುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ಒಗಟು ನೆಟ್ಟಿಗರ ಮನಸೋಲುವಂತೆ ಮಾಡಿದೆ. ಈ ಚಿತ್ರದಲ್ಲಿ ನೀವು ಬೆಕ್ಕನ್ನು ಗುರುತಿಸಬೇಕಾಗಿದೆ. ಹೌದು, ಚೆನ್ನಾಗಿ ಅಂದಗೊಳಿಸಲಾದ ಲಾನ್‌ನ ಚಿತ್ರವು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಚಿತ್ರದಲ್ಲಿ ಬೆಕ್ಕು ಎಷ್ಟು ಸಂಪೂರ್ಣವಾಗಿ ಮರೆಮಾಚಲ್ಪಟ್ಟಿದೆಯೆಂದರೆ ಇಂಟರ್ನೆಟ್ ಅದನ್ನು ಗುರುತಿಸಲು ಕಷ್ಟಪಡುತ್ತಿದೆ. ಈ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಫೋಟೋವು ಹಿತ್ತಲಿನಲ್ಲಿದ್ದ ಲಾನ್, ಚಕ್ರದ ತಳ್ಳುಬಂಡಿ, ಶೆಡ್, ಬೇಲಿ ಮತ್ತು ಮುದ್ದಾದ ಲಾಂಜ್ ಪ್ರದೇಶವನ್ನು ಒಳಗೊಂಡಿದೆ. ಬೆಕ್ಕನ್ನು ಹಿತ್ತಲಿನಲ್ಲಿ ಎಲ್ಲೋ ಸಂಪೂರ್ಣವಾಗಿ ಮರೆಮಾಚಲಾಗಿದೆ. ಈ ಆಪ್ಟಿಕಲ್ ಭ್ರಮೆಯು ಆನ್‌ಲೈನ್‌ನಲ್ಲಿ ಹೆಚ್ಚಿನ ಗಮನವನ್ನು ಸೆಳೆಯಿತು. ಇಂಗ್ಲೆಂಡ್‌ನ ಬ್ರಾಡ್‌ಫೋರ್ಡ್‌ನಲ್ಲಿ ವಾಸಿಸುವ ರಿಕಿ ಎಂಬ ಬೆಕ್ಕನ್ನು ಗುರುತಿಸಲು ನೆಟ್ಟಿಗರು ಹರಸಾಹಸಪಟ್ಟರು. ಕೆಲವು ಬಳಕೆದಾರರು ಅದನ್ನು ಹುಡುಕಲು ಸಾಧ್ಯವಾದರೆ, ಇತರರು ಅದನ್ನು ತುಂಬಾ ಕಷ್ಟಕರವೆಂದು ಕಂಡುಕೊಂಡರು.ನಿಮಗೆ ಬೆಕ್ಕನ್ನು ಗುರುತಿಸಲು ಸಾಧ್ಯವಾಯಿತೇ? ಇಲ್ಲದಿದ್ದರೆ, ನಾವು ಪರಿಹರಿಸುತ್ತೇವೆ. ರಿಕಿಯ ಮಾಲೀಕ ಲೀ ಓಮನ್ ಪ್ರಕಾರ, ಬೆಕ್ಕು ಚಕ್ರದ ಕೈಬಂಡಿ ಮತ್ತು ಶೆಡ್ ನಡುವೆ ಅಡಗಿಕೊಂಡಿವೆ ಎಂದು ಬಹಿರಂಗಪಡಿಸಿದ್ದಾರೆ. pic.twitter.com/7jbLfLToZ7 — There is no cat in this image (@Thereisnocat_) June 17, 2022