alex Certify ಈ ಆಪ್ಟಿಕಲ್ ಚಿತ್ರದಲ್ಲಿ ನೀವು ಬಾಗಿದ ರೇಖೆಯನ್ನು ಗುರುತಿಸಬಲ್ಲಿರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಆಪ್ಟಿಕಲ್ ಚಿತ್ರದಲ್ಲಿ ನೀವು ಬಾಗಿದ ರೇಖೆಯನ್ನು ಗುರುತಿಸಬಲ್ಲಿರಾ…?

ಸೋಷಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಇನ್ನೂ ಕೆಲವರಿಗೆ ತಲೆತಿರುಗುವಂತೆಯೂ ಆಗಿದೆ. ಈ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ರೆಲ್ ಕೂನ್ಸ್ ಎಂಬ ಬಳಕೆದಾರರು ಹಂಚಿಕೊಂಡಿದ್ದು, ಬಾಗಿದ ರೇಖೆಯನ್ನು ಹುಡುಕಿ ಎಂದು ಟ್ವೀಟ್ ಮಾಡಿದ್ದಾರೆ.

ಈ ವೈರಲ್ ಆಗಿರುವ ಆಪ್ಟಿಕಲ್ ಚಿತ್ರಕ್ಕೆ ಅನೇಕ ಬಳಕೆದಾರರು ತಮ್ಮ ಉತ್ತರಗಳು ಮತ್ತು ವಿವರಣೆಗಳೊಂದಿಗೆ ಪ್ರತ್ಯುತ್ತರಿಸಿದ್ದಾರೆ. ಅಮೆರಿಕಾದ ಮಾಜಿ ಬಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಕೂಡ ಟ್ವೀಟ್‌ಗೆ ಎಮೋಜಿಗಳೊಂದಿಗೆ ಉತ್ತರಿಸಿದ್ದಾರೆ. ಕೆಲವು ಬಳಕೆದಾರರು ಅವರು ಕಂಡುಕೊಂಡ ಚಿತ್ರ-ವಿಚಿತ್ರ ಉತ್ತರಗಳನ್ನು ನೀಡಿದ್ದಾರೆ.

ಹೆಚ್ಚಿನ ಬಳಕೆದಾರರು ಈ ಚಿತ್ರದಲ್ಲಿ ಯಾವುದೇ ಬಾಗಿದ ರೇಖೆಗಳಿಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ. ಟೈಲ್ಸ್ ಅನ್ನು ವಕ್ರ ರೇಖೆಗಳ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಟೈಲ್ಸ್ ಅನ್ನು ಎಚ್ಚರಿಕೆಯಿಂದ ನೋಡಿದರೆ, ಅವೆಲ್ಲವೂ ಒಂದೇ ಆಗಿವೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸದ್ಯ, ಈ ಟ್ವೀಟ್ ಭಾರಿ ವೈರಲ್ ಆಗಿದ್ದು, ಸಾವಿರಾರು ಲೈಕ್ಸ್, ಕಮೆಂಟ್ ಗಳನ್ನು ಗಳಿಸಿದೆ. ಈ ಚಿತ್ರ ನೋಡಿದ ನೆಟ್ಟಿಗರಂತು ಮಂಡೆಬಿಸಿ ಮಾಡಿದ್ದಂತೂ ಸುಳ್ಳಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...