
ಟ್ವಿಟ್ಟರ್ ಬಳಕೆದಾರರೊಬ್ಬರು ಗುಪ್ತ ಸಂಖ್ಯೆಗಳನ್ನು ತೋರಿಸುವ ಕಪ್ಪು ಮತ್ತು ಬಿಳಿ ವೃತ್ತದ ಭ್ರಮೆಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ವೃತ್ತದ ಅಂಕುಡೊಂಕಾದ ಮಾದರಿಯು ಕಣ್ಣನ್ನು ಅದು ಚಲಿಸುತ್ತಿದೆ ಎಂದು ಯೋಚಿಸುವಂತೆ ಮಾಡುತ್ತದೆ.
ನೀವು ಸಂಖ್ಯೆಯನ್ನು ನೋಡುತ್ತಿದ್ದೀರಾ? ಹಾಗಿದ್ದರೆ, ಯಾವ ಸಂಖ್ಯೆ? ಚಿತ್ರದಲ್ಲಿ ನೀವು ಯಾವ ಸಂಖ್ಯೆಯನ್ನು ನೋಡುತ್ತಿದ್ದೀರಿ..? ಮೊದಲ ಬಾರಿಗೆ ನೀವು ನೋಡಿದಾಗ ಬಹುಶಃ 528 ಇರಬಹುದು ಅಂತಾ ಅಂದುಕೊಂಡಿದ್ದೀರಾ..? ಬಳಿಕ ಇದು 15283 ಆಗಿದೆಯೇ? ಅಥವಾ ಇದು 45283 ಆಗಿದೆಯೇ? ಅಥವಾ 3452839 ಎಂದು ತೋರುತ್ತಿದ್ದು, ಬಹುಶಃ ನೀವು ಗೊಂದಲಕ್ಕೊಳಗಾಗಿರಬಹುದು. ಸದ್ಯ, ಈ ಟ್ವೀಟ್ ವೈರಲ್ ಆಗಿದ್ದು, ನೂರಾರು ಕಾಮೆಂಟ್‌ಗಳನ್ನು ಗಳಿಸಿದೆ. ಒಬ್ಬೊಬ್ಬರು ಒಂದೊಂದು ಉತ್ತರ ನೀಡಿದ್ದಾರೆ.
ಆಪ್ಟಿಕಲ್ ಭ್ರಮೆಯು ಕಾಂಟ್ರಾಸ್ಟ್ ಸೆನ್ಸಿಟಿವಿಟಿ ಅಳೆಯುವುದು ಎಂದು ತೋರುತ್ತದೆ. ವಿಷನ್ ಸೆಂಟರ್ ಪ್ರಕಾರ, ಕಾಂಟ್ರಾಸ್ಟ್ ಸೆನ್ಸಿಟಿವಿಟಿ ಎಂದರೆ ವಸ್ತು ಮತ್ತು ಅದರ ಹಿಂದಿನ ಹಿನ್ನೆಲೆಯ ನಡುವಿನ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯ. ಕಾಂಟ್ರಾಸ್ಟ್ ಸೆನ್ಸಿಟಿವಿಟಿ ದೃಷ್ಟಿ ತೀಕ್ಷ್ಣತೆಯಿಂದ ಭಿನ್ನವಾಗಿದೆ. ಇದು ನಿರ್ದಿಷ್ಟ ದೂರದಲ್ಲಿ ನಿಮ್ಮ ದೃಷ್ಟಿ ಎಷ್ಟು ಸ್ಪಷ್ಟವಾಗಿದೆ ಎಂಬುದನ್ನು ಅಳೆಯುತ್ತದೆ.
ಕಾಂಟ್ರಾಸ್ಟ್ ಸೆನ್ಸಿಟಿವಿಟಿ ಪರೀಕ್ಷೆಯು ನೀವು ಬೆಳಕು ಮತ್ತು ಕತ್ತಲೆಯ ನಡುವಿನ ವ್ಯತ್ಯಾಸವನ್ನು ಎಷ್ಟು ಚೆನ್ನಾಗಿ ಹೇಳಬಹುದು ಎಂಬುದನ್ನು ಅಳೆಯುತ್ತದೆ. ಇದಕ್ಕಾಗಿ, ವೈದ್ಯರು ವಿಭಿನ್ನ ರೀತಿಯ ಚಾರ್ಟ್ ಅನ್ನು ಬಳಸುತ್ತಾರೆ. ಅಲ್ಲಿ ಅಕ್ಷರಗಳು ಕ್ರಮೇಣ ಕಪ್ಪು ಬಣ್ಣದಿಂದ ಬೂದು ಬಣ್ಣಕ್ಕೆ ಮಸುಕಾಗುತ್ತವೆ.