ಸರಿಯಾಗಿ ಮುಖ ತೊಳೆದುಕೊಳ್ಳದೇ ಇರುವುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ, ಹಾಲು, ತುಪ್ಪ ಸೇವನೆಯಿಂದ ಮುಖದ ಮೇಲೆ ಮೊಡವೆಗಳೇಳುತ್ತವೆ. ಹಾಗಾಗಿ ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೆಲವೊಂದು ಕೆಟ್ಟ ಹವ್ಯಾಸಗಳನ್ನು ಅಥವಾ ಅಭ್ಯಾಸಗಳನ್ನು ಬಿಟ್ರೆ ಅಂದದ, ಕಲೆರಹಿತ ಸುಂದರ ಮುಖ ನಿಮ್ಮದಾಗುತ್ತದೆ.
ಮುಖವನ್ನು ದಿನಕ್ಕೆ ಎರಡು ಬಾರಿ ಸ್ವಚ್ಛವಾಗಿ ತೊಳೆದುಕೊಳ್ಳಿ. ಒಳ್ಳೆಯ ಗುಣಮಟ್ಟದ ಫೇಸ್ ವಾಶ್ ಬಳಸಿ.
ಡೈರಿ ಉತ್ಪನ್ನಗಳ ವಿಪರೀತ ಸೇವನೆಯಿಂದ ಮುಖದ ಮೇಲೆ ಮೊಡವೆಗಳು ಏಳುತ್ತವೆ. ಉರಿಯೂತ ಕೂಡ ಕಾಣಿಸಿಕೊಳ್ಳಬಹುದು. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಕೂಡ ಸೇವಿಸಬೇಡಿ. ಆಗ ಮೊಡವೆಯಿಂದ ಮುಕ್ತಿ ಪಡೆಯಬಹುದು.
ಸ್ಮಾರ್ಟ್ ಫೋನ್ ನಲ್ಲಿ ಹೆಚ್ಚು ಹೊತ್ತು ಮಾತನಾಡುವುದು ಕೂಡ ಮೊಡವೆಗೆ ಕಾರಣ. ಕಿವಿಯ ಬಳಿ ಮೊಬೈಲ್ ಇಟ್ಟುಕೊಂಡು ಬಹಳ ಹೊತ್ತು ಮಾತನಾಡುವುದರಿಂದ ಬ್ಯಾಕ್ಟೀರಿಯಾಗಳು ಮುಖದ ಚರ್ಮದ ರಂಧ್ರದ ಒಳಕ್ಕೆ ಪ್ರವೇಶಿಸುತ್ತವೆ. ಹಾಗಾಗಿ ಮೊಬೈಲ್ ನಲ್ಲಿ ಮಾತನಾಡುವಾಗ ಇಯರ್ ಫೋನ್ ಬಳಸಿ.
ಕೆಲವರು ಮುಖಕ್ಕೂ ಬಾಡಿ ಲೋಶನ್ ಹಚ್ಚಿಕೊಳ್ತಾರೆ. ಇದ್ರಿಂದ್ಲೂ ಮೊಡವೆಗಳೇಳುವ ಸಾಧ್ಯತೆ ಹೆಚ್ಚು. ಬಾಡಿ ಲೋಶನ್ ನಲ್ಲಿ ಬೆಣ್ಣೆಯ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಮುಖಕ್ಕೆ ಯಾವಾಗಲೂ ಫೇಸ್ ಕ್ರೀಮ್ ಹಚ್ಚಿ.
ಹೆಚ್ಚು ಸಿಹಿ ತಿನ್ನುವುದು ಒಳ್ಳೆಯದಲ್ಲ. ಸಕ್ಕರೆಯಲ್ಲಿ ಗ್ಲೆಸೆಮಿಕ್ ಪ್ರಮಾಣ ಹೆಚ್ಚಾಗಿರುತ್ತದೆ. ಹಾಗಾಗಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಡ್ ಪ್ರಮಾಣ ಅಧಿಕವಾಗಿರುವ ಯಾವುದೇ ಪದಾರ್ಥವನ್ನೂ ಹೆಚ್ಚಾಗಿ ಸೇವಿಸಬೇಡಿ. ಪೋಷಕಾಂಶ ಭರಿತ ಹಣ್ಣು ಮತ್ತು ತರಕಾರಿ ತಿನ್ನುವುದು ಉತ್ತಮ.