ಕೈಯಲ್ಲಿ ಹಣ ಇಲ್ಲ ಅಂದರೆ ಜೀವನ ಸಾಗಿಸೋದು ತುಂಬಾನೇ ಕಷ್ಟ. ಹಣವೇ ಇಲ್ಲ ಅಂದ್ಮೇಲೆ ಏನು ಮಾಡೋಕೂ ಸಾಧ್ಯವಿಲ್ಲ. ಹಣ ಬೇಕು ಅಂತಾ ಕಷ್ಟಪಟ್ಟು ದುಡೀತಾರೆ. ಹೊಟ್ಟೆ ಬಟ್ಟೆ ಕಟ್ತಾರೆ. ಆದರೆ ನಮ್ಮ ಜೀವನದ ಒಂದು ಚಿಕ್ಕ ಕೆಟ್ಟ ಅಭ್ಯಾಸದಿಂದಾಗಿ ಲಕ್ಷ್ಮೀ ಮನೆಯಲ್ಲಿ ನೆಲೆಸೊಲ್ಲ ಎಂದು ಹೇಳಿದೆ ವಾಸ್ತು ಶಾಸ್ತ್ರ.
ಲಕ್ಷ್ಮೀ ದೇವಿಯ ಅನುಗ್ರಹವಿಲ್ಲದೇ ಸಂಪತ್ತನ್ನ ಹೊಂದೋಕೆ ಸಾಧ್ಯವೇ ಇಲ್ಲ. ಹಾಗಾದ್ರೆ ಲಕ್ಷ್ಮೀಯನ್ನ ಸಂತೃಪ್ತಿಗೊಳಿಸೋಕೆ ಪೂಜೆ ಮಾಡೋದರ ಜೊತೆಗೆ ಇನ್ನೂ ಏನು ಮಾಡಬೇಕು ಅಂದ್ರೆ ಇದಕ್ಕೆ ಉತ್ತರ ನಿಮ್ಮೆ ನಿದ್ರೆಯ ಸಮಯದಲ್ಲಿ ಬದಲಾವಣೆ ಮಾಡಬೇಕು.
ಸೂಯೋದಯ ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ನಿದ್ರೆ ಮಾಡೋ ಅಭ್ಯಾಸ ನಿಮಗಿದ್ರೆ ಲಕ್ಷ್ಮೀ ದೇವಿ ಒಲಿಯೋಕೆ ಸಾಧ್ಯವೇ ಇಲ್ಲ. ಹೀಗಾಗಿ ಈ ಸಮಯದಲ್ಲಿ ನಿದ್ರೆ ಮಾಡುವ ಅಭ್ಯಾಸವನ್ನ ಬಿಟ್ಟುಬಿಡಿ.