ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಜನರಿಗೆ ಅನ್ನ ಅಂದರೆ ತುಂಬಾನೇ ಇಷ್ಟ. ಇನ್ನು ಕರಾವಳಿ ಭಾಗದ ಜನರಂತೂ ಅನ್ನವನ್ನ ತಿನ್ನದೇ ಇರಲಾರರು. ಇದೇ ಕಾರಣಕ್ಕೆ ಜನರು ತರಹೇವಾರಿ ಅಕ್ಕಿಗಳನ್ನ ಬಳಕೆ ಮಾಡ್ತಾರೆ. ಇದರಲ್ಲಿ ಬಿದಿರು ಅಕ್ಕಿ ಕೂಡ ಒಂದು. ಬಿದಿರು ಅಕ್ಕಿಯಲ್ಲಿ ದೇಹದ ಆರೋಗ್ಯವನ್ನ ಕಾಪಾಡಲು ಬೇಕಾದ ಪ್ರಮುಖ ಅಂಶಗಳು ಅಡಗಿವೆ.
ಬಿದಿರು ಅಕ್ಕಿಯನ್ನ ಸೇವಿಸುವ ಪುರುಷರಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ಸರಿಯಾಗಿ ಇರಲಿದೆ. ಬಿದಿರು ಅಕ್ಕಿಯು ಪುರುಷ ಹಾಗೂ ಮಹಿಳೆಯರಿಬ್ಬರಲ್ಲೂ ದೈಹಿಕ ಶಕ್ತಿಯನ್ನ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೇ ಸಂತಾನೋತ್ಪತ್ತಿ ಬೂಸ್ಟರ್ ಕೂಡ ಹೌದು. ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವವರು ಬಿದಿರಿನ ಬೀಜದಿಂದ ತೆಗೆದ ಎಣ್ಣೆಯನ್ನ ಬಳಕೆ ಮಾಡೋದ್ರಿಂದ ಈ ಸಮಸ್ಯೆಯಿಂದ ಪಾರಾಗಬಹುದಾಗಿದೆ.
ಸಾಮಾನ್ಯವಾದ ಅಕ್ಕಿ ಹಾಗೂ ಗೋಧಿಯಲ್ಲಿರುವ ಪೋಷಕಾಂಶಗಳಿಗಿಂತ ಹೆಚ್ಚಿನ ಅಂಶವನ್ನ ಬಿದಿರು ಅಕ್ಕಿ ಹೊಂದಿದೆ. ಸಂಧಿನೋವು, ಬೆನ್ನು ನೋವು ಹಾಗೂ ಸಂಧಿವಾತದಂತಹ ಸಮಸ್ಯೆಗಳಿಗೆ ಬಿದಿರು ತುಂಬಾನೇ ಉಪಕಾರಿ. ಅಲ್ಲದೇ ಬಿದಿರು ಅಕ್ಕಿ ಸೇವನೆಯಿಂದ ದೇಹದಲ್ಲಿರುವ ಕೆಟ್ಟ ಕೊಬ್ಬಿನ ಅಂಶ ಕೂಡ ಕಡಿಮೆಯಾಗಲಿದೆ. ಇದು ಮಾತ್ರವಲ್ಲದೇ ದೇಹದಲ್ಲಿ ಸಕ್ಕರೆ ಅಂಶವನ್ನ ಸರಿದೂಗಿಸುವಲ್ಲಿಯೂ ಬಿದಿರು ಅಕ್ಕಿ ಸಹಕಾರಿ.
ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವ ಪುರುಷರಿಗೂ ಬಿದಿರು ಅಕ್ಕಿಯಿಂದ ತುಂಬಾನೇ ಲಾಭವಿದೆ. ಬಿದಿರು ಅಕ್ಕಿ ಸೇವನೆಯಿಂದ ದೇಹದಲ್ಲಿ ವೀರ್ಯಾಣುಗಳ ಉತ್ಪತ್ತಿ ಹೆಚ್ಚಲಿದೆ.