ಈಗ ಹೆಚ್ಚಿನವರಿಗೆ ಕಾಡುವ ಸಮಸ್ಯೆ ಎಂದರೆ ತೂಕ ಹೆಚ್ಚಾಗುವಿಕೆ, ಆಹಾರ ಪದ್ಧತಿ, ದೇಹಕ್ಕೆ ಸರಿಯಾದ ವ್ಯಾಯಾಮ ಇಲ್ಲದಿರುವಿಕೆ , ಥೈರಾಯಿಡ್ ಸಮಸ್ಯೆ ಈ ಎಲ್ಲಾ ಕಾರಣಗಳಿಂದ ತೂಕ ಹೆಚ್ಚಾಗುತ್ತದೆ.
ಜಿಮ್ ಗೆ ಹೋಗುವುದಕ್ಕೆ, ಯೋಗ ಮಾಡುವುದಕ್ಕೆ ಸಮಯವಿಲ್ಲ ಎನ್ನುವವರು ಮನೆಯಲ್ಲಿ ಈ ತೂಕ ಕಡಿಮೆಯಾಗುವ ಕಷಾಯವನ್ನು ಮಾಡಿಕೊಂಡು ಕುಡಿದರೆ ದೇಹಕ್ಕೂ ಒಳ್ಳೆಯದು ಹಾಗೂ ತೂಕವು ಕ್ರಮೇಣ ಇಳಿಕೆಯಾಗುತ್ತದೆ.
ಒಂದು ಚಮಚ ತಂಪಿನಬೀಜವನ್ನು ಒಂದು ಗ್ಲಾಸ್ ನೀರಿನಲ್ಲಿ ರಾತ್ರಿ ನೆನೆ ಹಾಕಿ. ಬೆಳಿಗ್ಗೆ ಎದ್ದು ಖಾಲಿಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ಇದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ. ದೇಹದ ಉಷ್ಣತೆ ಕೂಡ ಕಡಿಮೆಯಾಗುತ್ತದೆ. ಇದು ದೇಹದಲ್ಲಿನ ಬೇಡ ಕಲ್ಮಷವನ್ನು ಹೊರಹಾಕುವುದಕ್ಕೆ ಸಹಾಯ ಮಾಡುತ್ತದೆ. ಹಾಗೂ ಕೊಲೆಸ್ಟ್ರಾಲ್ ಅನ್ನು ಕೂಡ ಕಡಿಮೆ ಮಾಡುತ್ತದೆ.
ಇನ್ನು ಒಂದು ಗ್ಲಾಸ್ ನೀರಿಗೆ 1 ಚಮಚ ಜೀರಿಗೆ ಹಾಕಿ ರಾತ್ರೀಯಿಡೀ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ. ನಂತರ ಇನ್ನೊಂದು ಗ್ಲಾಸಿಗೆ ಸೋಸಿಕೊಂಡು ಸ್ವಲ್ಪ ಜೇನುತುಪ್ಪ, ನಿಂಬೆ ರಸ ಹಾಕಿ ಕುಡಿಯಿರಿ. ನೀರು ತುಂಬಾ ಬಿಸಿ ಇರುವಾಗ ಜೇನುತುಪ್ಪ ಹಾಕಬೇಡಿ. ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಇದನ್ನು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ.
ಇನ್ನು ಆ್ಯಪಲ್ ಸೈಡರ್ ವಿನೇಗರ್ ಅನ್ನು ನೀರಿಗೆ ಬೆರೆಸಿಕೊಂಡು ಕುಡಿಯುವುದರಿಂದ ನಿಮ್ಮ ದೇಹದ ತೂಕ ಇಳಿಕೆಯಾಗುತ್ತದೆ,.ಇದರಲ್ಲಿನ ಅಸಿಟಿಕ್ ಆ್ಯಸಿಡ್ ತೂಕ ಏರಿಕೆಯಾಗುವುದನ್ನು ಕಡಿಮೆ ಮಾಡುತ್ತದೆ ಹಾಗ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ.
ಇನ್ನು ಲಿಂಬೆಹಣ್ಣು ಹಾಗೂ ಶುಂಠಿಯ ಪಾನೀಯ ಕೂಡ ತೂಕ ಇಳಿಕೆಗೆ ಸಹಾಯಕಾರಿ.ಒಂದು ಇಂಚು ಶುಂಠಿಯನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಒಂದು ಗ್ಲಾಸ್ ನೀರನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಕತ್ತರಿಸಿಕೊಂಡ ಶುಂಠಿಯನ್ನು ಹಾಕಿ ಅದು ಕುದ್ದ ನಂತರ ಅದಕ್ಕೆ 1 ಟೀ ಸ್ಪೂನ್ ಜೀರಿಗೆ ಪುಡಿಯನ್ನು ಹಾಕಿ. ನಂತರ ಸೋಸಿಕೊಳ್ಳಿ. ಆಮೇಲೆ 1 ಟೀ ಸ್ಪೂನ್ ನಿಂಬೆ ಹಣ್ಣಿನ ರಸ ಹಾಕಿಕೊಂಡು ಕುಡಿಯಿರಿ.