
ದೌರ್ಭಾಗ್ಯ ಸೌಭಾಗ್ಯದ ಕೈ ಹಿಡಿಯುವುದಿಲ್ಲ. ದೌರ್ಭಾಗ್ಯ ಬೆನ್ನು ಹತ್ತಿದ್ರೆ ಮಾಡಿದ ಕೆಲಸ ಫಲ ನೀಡುವುದಿಲ್ಲ. ಸದಾ ಸಮಸ್ಯೆ, ಸಂಕಷ್ಟ ಕಾಡುತ್ತದೆ. ಶಾಸ್ತ್ರದಲ್ಲಿ ಹೇಳಿದ ಕೆಲವೊಂದು ಉಪಾಯಗಳನ್ನು ಪ್ರತಿ ದಿನ ಮಾಡುತ್ತ ಬಂದಲ್ಲಿ ನಿಧಾನವಾಗಿ ದೌರ್ಭಾಗ್ಯ, ಸೌಭಾಗ್ಯವಾಗಿ ಬದಲಾಗುತ್ತದೆ.
ಪ್ರತಿ ದಿನ ಸ್ನಾನ ಮಾಡಿದ ನಂತ್ರ ಸೂರ್ಯ ದೇವನಿಗೆ ಜಲವನ್ನು ಅರ್ಪಿಸಿ. ಸೂರ್ಯನನ್ನು ಆತ್ಮಕ್ಕೆ ಹೋಲಿಸಲಾಗುತ್ತದೆ. ಪ್ರತಿ ದಿನ ಸೂರ್ಯನಿಗೆ ಜಲ ಅರ್ಪಿಸಿದ್ರೆ ಪಿತೃದೋಷ ದೂರವಾಗುತ್ತದೆ.
ಪ್ರತಿ ದಿನ ಬೆಳಿಗ್ಗೆ ತುಳಸಿಗೆ ನೀರನ್ನು ಅರ್ಪಿಸಿ. 11 ಬಾರಿ ಪ್ರದಕ್ಷಿಣೆ ಹಾಕಿ. ‘ಓಂ ನಮೋಃ ಭಗವತೆ ವಾಸುದೇವಾಯ ನಮಃ’ ಮಂತ್ರವನ್ನು ಜಪಿಸಿ.
ಬಡವರಿಗೆ ಕಪ್ಪು ಕಂಬಳಿಯನ್ನು ದಾನ ನೀಡಿ. ರಾಹು-ಕೇತುವಿನ ದೋಷ ನಿವಾರಣೆಯಾಗುತ್ತದೆ.
ಶಿವಲಿಂಗಕ್ಕೆ ತಾಮ್ರದ ಪಾತ್ರೆಯಿಂದ ನೀರನ್ನು ಅರ್ಪಿಸಿ. ಕಪ್ಪು ಎಳ್ಳನ್ನು ದಾನ ಮಾಡಿ.