ರೆಮೋ ಡಿಸೋಜಾ : ಸದ್ಯ ಬಹು ಬೇಡಿಕೆಯ ಕೊರಿಯೋಗ್ರಾಫರ್ ಅಂದ್ರೆ ರೆಮೋ ಡಿಸೋಜಾ. ಇವರು ಕೂಡ ಕೊರಿಯೋಗ್ರಾಫರ್ ಆಗಿ ಬಾಲಿವುಡ್ ಪ್ರವೇಶಿಸಿರಲಿಲ್ಲ. ‘ಪರ್ದೇಸ್’ ಚಿತ್ರದಲ್ಲಿ ಹಿನ್ನೆಲೆ ಡಾನ್ಸರ್ ಆಗಿ ಕಾಣಿಸಿಕೊಂಡಿದ್ರು.
ನೀತು ಚಂದ್ರ : ಈ ನಟಿ ಕೂಡ ‘ಮೇರಾ ಬಾಬು ಚೈಲ್ ಚಬೀಲಾ’ ಎಂಬ ಹಾಡಿನಲ್ಲಿ ಕಾಣಿಸಿಕೊಂಡಿದ್ದಳು. ಅದರಲ್ಲಿ ಸೋಫಿ ಚೌಧರಿ ಕೂಡ ಸ್ಟೆಪ್ ಹಾಕಿದ್ದರು.
ಇಶಾ ಶರ್ವಾಣಿ : ಇಶಾ ಅದ್ಭುತ ನೃತ್ಯಗಾತಿ. ‘ತಾಲ್’ ಚಿತ್ರದಲ್ಲಿ ಇಶಾ ಶರ್ವಾಣಿ ಹಿನ್ನೆಲೆ ಡಾನ್ಸರ್ ಆಗಿದ್ದರು. ನಂತರ ಇಶಾಗೆ ನಾಯಕಿಯಾಗಿ ನಟಿಸುವ ಚಾನ್ಸ್ ಕೂಡ ಸಿಕ್ಕಿತ್ತು.
ಫರಾ ಖಾನ್ : ಹಿಂದಿ ಚಿತ್ರರಂಗದ ಜನಪ್ರಿಯ ಕೊರಿಯೋಗ್ರಾಫರ್ ಫರಾ ಖಾನ್. ಆದ್ರೆ ಅವರ ಜರ್ನಿ ಕೂಡ ಆರಂಭವಾಗಿದ್ದು ಒಬ್ಬ ಡಾನ್ಸರ್ ಆಗಿ. ‘ಹಮ್ ಹೈ ನೌಜವಾನ್’ ಹಾಡಿನಲ್ಲಿ ಫರಾ ಹಿನ್ನೆಲೆ ನೃತ್ಯಗಾತಿಯಾಗಿದ್ದರು.
ಡೈಸಿ ಶಾ : ಸಲ್ಮಾನ್ ಖಾನ್ ಚಿತ್ರದಲ್ಲಿ ಹಿನ್ನೆಲೆ ಡಾನ್ಸರ್ ಆಗಿದ್ದ ಡೈಸಿ ಶಾಗೆ ಬಾಲಿವುಡ್ ನಲ್ಲಿ ಚಾನ್ಸ್ ಸಿಕ್ಕಿತ್ತು. 2014ರಲ್ಲಿ ಸಲ್ಲು ಅಭಿನಯದ ‘ಜೈ ಹೋ’ ಚಿತ್ರದಲ್ಲಿ ಡೈಸಿ ನಾಯಕಿಯಾಗಿ ನಟಿಸಿದ್ದಾರೆ. ಇದಕ್ಕೂ ಮುನ್ನ ‘ತೇರೆ ನಾಮ್’ ಚಿತ್ರದಲ್ಲಿ ಡೈಸಿ ಹಿನ್ನೆಲೆ ಡಾನ್ಸರ್ ಆಗಿದ್ದರು.
ದಿಯಾ ಮಿರ್ಜಾ : ದಿಯಾ ಮಿರ್ಜಾ ಕೂಡ ಮೊದಲು ಹಿನ್ನೆಲೆ ಡಾನ್ಸರ್ ಆಗಿ ಕೆಲಸ ಮಾಡಿದ್ದಾರೆ. ದಕ್ಷಿಣ ಭಾರತದ ಹಾಡು ‘ಏನ್ ಸ್ವಾಸಾ ಕಾಟ್ರೆ’ ಹಾಡಿನಲ್ಲಿ ದಿಯಾ ಸೊಂಟ ಬಳುಕಿಸಿದ್ದರು.
ಅರ್ಶದ್ ವಾರ್ಸಿ : ಕಾಮಿಡಿ ಆ್ಯಕ್ಟಿಂಗ್ ಮೂಲಕವೇ ಗಮನ ಸೆಳೆದ ನಟ ಅರ್ಶದ್ ವಾರ್ಸಿ. ನಟನಾಗುವ ಮುನ್ನ ಅವರು ಕೊರಿಯೋಗ್ರಾಫರ್ ಆಗಿದ್ದರು. ‘ಆಗ್ ಸೆ ಖೇಲೇಂಗೆ’ ಚಿತ್ರದ ‘ಹೆಲ್ಪ್ ಮಿ’ ಹಾಡಿನಲ್ಲಿ ಅರ್ಷದ್ ಕಾಣಿಸಿಕೊಂಡಿದ್ದರು.