ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಆಹಾರ ತಯಾರಿಕೆ ಜೊತೆಗೆ ಕೆಲವೊಂದು ಔಷಧಿಗೂ ಈರುಳ್ಳಿ ಬಳಸ್ತಾರೆ. ಈರುಳ್ಳಿ ಸಿಪ್ಪೆ ತೆಗೆದು ಕಸಕ್ಕೆ ಹಾಕ್ತಾರೆ. ಆದ್ರೆ ಈರುಳ್ಳಿ ಸಿಪ್ಪೆಯಲ್ಲೂ ಸಾಕಷ್ಟು ಔಷಧ ಗುಣವಿದೆ ಎಂಬುದು ನಿಮಗೆ ಗೊತ್ತಾ?
ಈರುಳ್ಳಿ ಆಂಟಿಆಕ್ಸಿಡೆಂಟ್ ಗುಣ ಹೊಂದಿದೆ. ಟೀ ಅಥವಾ ಸೂಪ್ ಮಾಡುವ ವೇಳೆ ಈರುಳ್ಳಿ ಸಿಪ್ಪೆಯನ್ನು ಹಾಕಿ ಕುದಿಸಬೇಕು. ಆಂಟಿಆಕ್ಸಿಡೆಂಟ್ ಚರ್ಮ ಹಾಗೂ ದೇಹದ ಒಳ ಭಾಗವನ್ನು ಸ್ವಚ್ಛಗೊಳಿಸುತ್ತದೆ. ರೋಗ-ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಈರುಳ್ಳಿ ಸಿಪ್ಪೆ ಗಂಟಲು ನೋವನ್ನು ಗುಣಪಡಿಸುವ ಶಕ್ತಿ ಹೊಂದಿದೆ. ನೀರಿಗೆ ಈರುಳ್ಳಿ ಸಿಪ್ಪೆಯನ್ನು ಹಾಕಿ ಕುದಿಸಿ. ಈ ನೀರಿನಲ್ಲಿ ನಂತ್ರ ಬಾಯಿ ಮುಕ್ಕಳಿಸಿ. ಇದ್ರಿಂದ ಗಂಟಲು ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಈರುಳ್ಳಿ ಸಿಪ್ಪೆ ಮುಖದ ಕಲೆಯನ್ನು ಹೋಗಲಾಡಿಸುತ್ತದೆ. ಸ್ವಲ್ಪ ರಸವಿರುವ ಈರುಳ್ಳಿ ಸಿಪ್ಪೆಯನ್ನು ತೆಗೆದು ಅದಕ್ಕೆ ಸ್ವಲ್ಪ ಅರಿಶಿನವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ನಂತ್ರ ಒಣಗಿದ ಕೈನಲ್ಲಿ ನಿಧಾನವಾಗಿ ಮಸಾಜ್ ಮಾಡಿ. ವಾರಕ್ಕೊಮ್ಮೆ ಈ ಮಸಾಜ್ ಮಾಡಿದ್ರೆ ಮುಖದ ಕಲೆ ದೂರವಾಗಲಿದೆ.