alex Certify ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದೇಕೆ…..? ಅದನ್ನು ತಡೆಯಲು ಸುಲಭದ ಟಿಪ್ಸ್‌… | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದೇಕೆ…..? ಅದನ್ನು ತಡೆಯಲು ಸುಲಭದ ಟಿಪ್ಸ್‌…

ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದು ಸಹಜ. ಕಣ್ಣೀರು ಸುರಿಯುವುದಕ್ಕೆ ಮುಖ್ಯ ಕಾರಣವೆಂದರೆ ಈರುಳ್ಳಿಯಿಂದ ಬಿಡುಗಡೆಯಾಗುವ ರಾಸಾಯನಿಕ. ಅದು ನಿಮ್ಮ ಕಣ್ಣುಗಳಿಗೆ ಹೋದಾಗ ಕಣ್ಣಲ್ಲಿ ನೀರು ಬರುತ್ತದೆ. ಆದ್ರೆ ಇನ್ಮೇಲೆ ನೀವು ಕಣ್ಣೀರು ಹಾಕದೇ ಈರುಳ್ಳಿ ಹೆಚ್ಚಬಹುದು. ಅದ್ಹೇಗೆ ಅನ್ನೋದನ್ನು ನಾವ್‌ ಹೇಳ್ತೀವಿ.

ಟ್ರಿನಾ ಮಿಚೆಲ್ ಎಂಬ ಮಹಿಳೆ ಈ ವಿಚಾರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯ ಪ್ರಕಾರ, ನೀವು ಈರುಳ್ಳಿ ಕತ್ತರಿಸಿದಾಗ ಕಣ್ಣೀರು ಬರಲು ಕಾರಣವೆಂದರೆ ಈರುಳ್ಳಿಯಲ್ಲಿರುವ ರಾಸಾಯನಿಕಗಳು. ಹತ್ತಿರದ ನೀರಿನ ಮೂಲದ ಕಡೆಗೆ ಕಣ್ಣುಗಳು ಆಕರ್ಷಿತವಾಗುತ್ತವೆ. ಈ ಕಾರಣದಿಂದಾಗಿ, ನಿಮ್ಮ ಕಣ್ಣುಗಳಿಂದ ಕಣ್ಣೀರು ಹರಿಯಲು ಪ್ರಾರಂಭಿಸುತ್ತದೆ.

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಹರಿಯುವುದನ್ನು ತಡೆಯಬೇಕಾದರೆ ನಾವು ಆ ರಾಸಾಯನಿಕವನ್ನು ಕಣ್ಣುಗಳ ಬದಲಿಗೆ ಎಲ್ಲೋ ತಿರುಗಿಸಬೇಕು. ಟಿಶ್ಯೂ ಪೇಪರ್‌ ತೆಗೆದುಕೊಂಡು ಅದನ್ನು ಒದ್ದೆ ಮಾಡಿ. ನಂತರ ನೀವು ಈರುಳ್ಳಿ ಕತ್ತರಿಸುವ ಸ್ಥಳದಲ್ಲಿ ಒದ್ದೆಯಾದ ಟಿಶ್ಯೂ ಮತ್ತು ಸ್ವಲ್ಪ ನೀರನ್ನು ಇರಿಸಿ. ಹೀಗೆ ಮಾಡುವುದರಿಂದ ಈರುಳ್ಳಿ ಕತ್ತರಿಸುವ ಸಮಯದಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳು ನಿಮ್ಮ ಕಣ್ಣುಗಳಿಗೆ ಬದಲಾಗಿ ಒದ್ದೆಯಾದ ಕಾಗದದ ಟವಲ್‌ಗೆ ವರ್ಗಾಯಿಸಲ್ಪಡುತ್ತವೆ.

ಮಹಿಳೆಯ ಈ ಫೇಸ್ ಬುಕ್ ಪೋಸ್ಟ್ ವೈರಲ್ ಆಗಿದೆ. ಟ್ರಿನಾ ಮಿಚೆಲ್ ನೀಡಿದ ಐಡಿಯಾವನ್ನು ಅನೇಕ ಜನರು ಪ್ರಯೋಗ ಮಾಡಿದ್ದಾರೆ. ಈ ಟ್ರಿಕ್‌ ನಿಜಕ್ಕೂ ವರ್ಕ್‌ ಆಗ್ತಿದೆ ಅಂತಾನೂ ಅಭಿಪ್ರಾಯಪಟ್ಟಿದ್ದಾರೆ. ಈ ಕಲ್ಪನೆ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಈ ರೀತಿ ಮಾಡಿದಾಗ ಎಷ್ಟೋ ಜನರಿಗೆ ಈರುಳ್ಳಿ ಕತ್ತರಿಸುವಾಗ ನೀರು ಬಂದಿಲ್ಲವಂತೆ. ಕೆಲವರು ಮಾತ್ರ ಈ ಸಲಹೆ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ಮಹಿಳೆ ಹೇಳಿರೋ ಸಲಹೆಯನ್ನು ಪಾಲಿಸಿದ್ರೂ ಕಣ್ಣೀರು ಬರುತ್ತಿದೆ. ಇದನ್ನು ತಪ್ಪಿಸಲು ಕನ್ನಡಕ ಧರಿಸುವುದೊಂದೇ ಸುರಕ್ಷಿತ ಮಾರ್ಗ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...