ಹಬ್ಬಗಳು ಬಂತೆಂದರೆ ಮನೆ, ಸಲಕರಣೆಗಳ ಶುಚಿ ಕಾರ್ಯ ನಡೆಯುತ್ತದೆ. ಅದರಲ್ಲಿಯೂ ದೀಪಾವಳಿ ಹಬ್ಬ ಬಂತೆಂದರೆ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತದೆ. ಇದು ಬಹುತೇಕ ಮನೆಗಳಲ್ಲಿ ಸಾಮಾನ್ಯ. ಆದರೆ ಇಲ್ಲೊಬ್ಬ ಪುಣ್ಯಾತ್ಮ ಮಾಡಿರುವ ಸ್ವಚ್ಛತಾ ಕಾರ್ಯ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದೆ.
ವ್ಯಕ್ತಿಯೊಬ್ಬ ತಮ್ಮ ಮನೆಯ ಟಿವಿಯನ್ನು ಸ್ವಚ್ಛಗೊಳಿಸುತ್ತಿದ್ದಾನೆ. ಸಹಜವಾಗಿ ಸ್ವಚ್ಛಗೊಳಿಸಿದ್ದರೆ ಅದೇನು ಸುದ್ದಿಯಾಗುತ್ತಿರಲಿಲ್ಲ. ಆದರೆ ಈತ ಹರಿಯುವ ನೀರಿನ ಪೈಪ್ ಮೂಲಕ ಟಿ.ವಿಯ ಮೇಲೆ ನೀರು ಹಾಯಿಸಿ ಅದನ್ನು ಶುಚಿಗೊಳಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಹೀಗೆ ಸ್ವಚ್ಛಗೊಳಿಸುವಾಗ ಟಿ.ವಿ.ಯ ಮೇಲಿರುವ ಕೊಳೆಯನ್ನು ತೆಗೆದುಹಾಕಲು ಅದನ್ನು ಉಜ್ಜುತ್ತಿರುವುದನ್ನೂ ನೋಡಬಹುದಾಗಿದೆ.
ಇದರ ವಿಡಿಯೋ ಜಾಲತಾಣದಲ್ಲಿ ಥಹರೇವಾರಿ ಕಮೆಂಟ್ಗಳೊಂದಿಗೆ ಶೇರ್ ಆಗುತ್ತಿದೆ. ವಿಡಿಯೋದ ಜತೆ ಹಾಸ್ಯಭರಿತ ಶೀರ್ಷಿಕೆ ಕೂಡ ನೀಡಲಾಗುತ್ತಿದೆ. “ಈ ಮನುಷ್ಯ ಉಚಿತ….. ಯಾವುದೇ ಹಬ್ಬದಲ್ಲಿ ಸ್ವಚ್ಛಗೊಳಿಸಲು ಅಗತ್ಯವಿದ್ದರೆ ತಿಳಿಸಿ…… ಅವನ ಸಾರಿಗೆ ವೆಚ್ಚವನ್ನು ನಾನು ಪಾವತಿಸುತ್ತೇನೆ” ಎಂದು ಶೀರ್ಷಿಕೆ ನೀಡಲಾಗಿದೆ. ಇದೇ ರೀತಿ ಓರ್ವ ವ್ಯಕ್ತಿ ತನ್ನ ಲ್ಯಾಪ್ಟಾಪ್ ಅನ್ನು ಇದೇ ರೀತಿ ಶುಚಿಗೊಳಿಸುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
https://twitter.com/tahirsh778866/status/1581891460244201473?ref_src=twsrc%5Etfw%7Ctwcamp%5Etweetembed%7Ctwterm%5E1581891460244201473%7Ctwgr%5Ea85bcf524be5532ec2f8bb3ea56bad309001867d%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fman-washes-tv-computer-screen-netizens-call-it-the-biggest-mistake-during-diwali-cleaning-6190327.html