ಕೋವಿಡ್-19 ಸಾಂಕ್ರಾಮಿಕವು ಆನ್‌ಲೈನ್ ಕಲಿಕೆಯ ಕಲ್ಪನೆಯೊಂದಿಗೆ ನಮಗೆಲ್ಲರಿಗೂ ಆರಾಮದಾಯಕವಾಗಿಸಿದೆ. ಆದರೆ, ಕೆಲವೊಂದು ವಾಸ್ತವಿಕವಾಗಿ ಕಲಿಯಲು ಸಾಧ್ಯವಾಗದ ವಿಷಯಗಳಿವೆ. ಅದರಲ್ಲಿ ಈಜು ಕೂಡ ಸೇರಿದೆ. ಈಜನ್ನು ನೀವು ಆನ್ ಲೈನ್ ನಲ್ಲಿ ಕಲಿಯಲು ಸಾಧ್ಯವಿಲ್ಲ. ಇದೀಗ ಚೀನಾದ ಶಾಂಘೈನಲ್ಲಿರುವ ವಿಶ್ವವಿದ್ಯಾನಿಲಯವು ತನ್ನ ವಿದ್ಯಾರ್ಥಿಗಳಿಗೆ 50-ಮೀಟರ್ (164 ಅಡಿ) ಈಜು ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲು ಮುಂದಾಗಿದೆ. ಇದನ್ನು ಕೇಳಿದ ನೆಟ್ಟಿಗರು ತಬ್ಬಿಬ್ಬಾಗಿದ್ದಾರೆ.
ಕೆಲವು ಚೀನೀ ವಿಶ್ವವಿದ್ಯಾನಿಲಯಗಳ ಪ್ರಕಾರ, ವಿದ್ಯಾರ್ಥಿಗಳು ತಮ್ಮ ಪದವಿಯ ಮೊದಲು ಈಜು ಕಲಿಯುವುದು ಮುಖ್ಯ ಜೀವನ ಕೌಶಲ್ಯ ಮತ್ತು ಫಿಟ್‌ನೆಸ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇತ್ತೀಚೆಗೆ ಈಜಿಗಾಗಿ ಆನ್‌ಲೈನ್ ಪರೀಕ್ಷೆಯನ್ನು ನಡೆಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಆನ್‌ಲೈನ್ ಈಜು ಪರೀಕ್ಷೆಯನ್ನು ಪೂರ್ಣಗೊಳಿಸಲು, ವಿದ್ಯಾರ್ಥಿಗಳು ಕ್ಯಾಂಪಸ್ ನೆಟ್‌ವರ್ಕ್‌ಗೆ ಲಾಗ್ ಇನ್ ಮಾಡಿ ಉತ್ತರಿಸಬೇಕಾಗಿತ್ತು. ಆನ್‌ಲೈನ್ ಈಜು ಪರೀಕ್ಷೆಯ ಕಲ್ಪನೆಯು ನೆಟ್ಟಿಗರಿಗೆ ಸರಿ ತೋರಿಲ್ಲ. ಇದು ಶೀಘ್ರದಲ್ಲೇ ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೀಬೊ ಬಳಕೆದಾರರಿಂದ ಪ್ರತಿಕ್ರಿಯೆಗಳ ಸರಣಿಯನ್ನು ಹುಟ್ಟುಹಾಕಿತು. ಈ ಬಗ್ಗೆ ಹಲವಾರು ಮಂದಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ವಾರ್ಸಿಟಿಯ ಪೋಸ್ಟ್ ಬಳಕೆದಾರರಿಂದ 70,000 ಕ್ಕೂ ಹೆಚ್ಚು ಸಂವಾದಗಳನ್ನು ಸ್ವೀಕರಿಸಿದೆ.