
ಶಾರುಖ್ ಅಭಿಮಾನಿಯಾಗಿರುವ ಅಶ್ವಿನಿ ದೇಶಪಾಂಡೆ ಎಂಬುವವರು ಈಜಿಪ್ಟ್‌ನಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಈಜಿಪ್ಟ್‌ನಲ್ಲಿರುವ ಟ್ರಾವೆಲ್ ಏಜೆಂಟ್‌ಗೆ ಹಣವನ್ನು ವರ್ಗಾಯಿಸುವಾಗ ಅಶ್ವಿನಿ ಅವರಿಗೆ ಸಮಸ್ಯೆ ಉಂಟಾಗಿದೆ. ಅದಕ್ಕೆ ಏಜೆಂಟ್ ಹೇಳಿದ್ದೇನು ಎಂದು ಕೇಳಿದ್ರೆ ಅಚ್ಚರಿ ಪಡ್ತೀರಾ..! ಯಾಕಂದ್ರೆ ಶಾರುಖ್ ಖಾನ್ ದೇಶದವರಾಗಿರೋದ್ರಿಂದ, ತಾನು ನಿಮ್ಮನ್ನು ನಂಬುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಅಶ್ವಿನಿ ಅವರ ಹೆಸರಲ್ಲಿ ನೋಂದಾಯಿಸಿದ್ದು, ನಂತರ ಹಣ ಪಾವತಿ ಮಾಡಬಹುದು ಎಂದು ಕೂಡ ಹೇಳಿದ್ದಾರೆ.
ಇದನ್ನು ಕೇಳಿದ ಅಶ್ವಿನಿ ದೇಶಪಾಂಡೆ ಅವರಿಗೆ ಅಚ್ಚರಿಯಾಗಿದೆ. ಇದನ್ನು ಟ್ವಿಟ್ಟರ್ ನಲ್ಲಿ ಅವರು ಹಂಚಿಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಅನೇಕ ಮಂದಿ ಬಳಕೆದಾರರು ತಮಗಾಗಿರೋ ಅನುಭವದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರನೊಬ್ಬ ಪ್ರತಿಕ್ರಿಯಿಸಿದ್ದು, ಪ್ಯಾರಿಸ್ ಹೋಟೆಲ್ ವೊಂದರ ಮಾಲೀಕ ಶಾರುಖ್ ಅಭಿಮಾನಿಯಾಗಿದ್ದರಿಂದ ತನಗೆ ಅಗ್ಗದ ವಸತಿ ದೊರೆತಿದ್ದ ಬಗ್ಗೆ ಹೇಳಿಕೊಂಡಿದ್ದಾನೆ.