
ಖಾಕಿ ಸ್ಟುಡಿಯೋದ ಸದಸ್ಯರು ಕ್ಲಾರಿನೆಟ್, ಸ್ಯಾಕ್ಸೋಫೋನ್, ಟ್ರಂಪೆಟ್ ಮತ್ತು ಕೊಳಲು ಸೇರಿದಂತೆ ಇತರ ವಾದ್ಯಗಳನ್ನು ಪ್ರದರ್ಶಿಸಿದೆ. ಯಾ ಮುಸ್ತಫಾ ಈಜಿಪ್ಟ್‌ನ ಪ್ರಸಿದ್ಧ ಬಹುಭಾಷಾ ಹಾಡಾಗಿದೆ.
ಪ್ರಸಿದ್ಧ ಈಜಿಪ್ಟ್ ಸಂಗೀತಗಾರ ಮೊಹಮ್ಮದ್ ಫೌಜಿ ಅವರು ಸಂಯೋಜಿಸಿದ್ದಾರೆ. ಹಾಗೂ ಅದನ್ನು ವಿವಿಧ ಭಾಷೆಗಳಲ್ಲಿ ಹಲವಾರು ವಿಭಿನ್ನ ಆವೃತ್ತಿಗಳಲ್ಲಿ ರೆಕಾರ್ಡ್ ಮಾಡಲಾಗಿದೆ. 1960ರಲ್ಲಿ ಫ್ರಾನ್ಸ್‌ನಲ್ಲಿ ಬಿಡುಗಡೆ ಮಾಡಿದ ಗಾಯಕ ಬಾಬ್ ಅಜ್ಜಮ್ ಅವರ ಸಹಾಯದಿಂದ ಈ ಹಾಡು ಮೊದಲು ಯುರೋಪ್‌ನಲ್ಲಿ ಜನಪ್ರಿಯವಾಯಿತು.
ಈ ಹಾಡಿನ ಟ್ಯೂನ್ ನುಡಿಸಿದ ಮುಂಬೈ ಪೊಲೀಸ್ ಬ್ಯಾಂಡ್ ತಂಡದ ವಿಡಿಯೋ ವೈರಲ್ ಆಗಿದೆ. ಪೊಲೀಸರು ಸುಮಧುರವಾದ ನಿರೂಪಣೆಯನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ.