ಬಾಲಿವುಡ್ ಹಾಡೊಂದಕ್ಕೆ ಯುವತಿಯೊಬ್ಬಳು ಅಮೆರಿಕಾದ ಲಾಸ್ ಏಂಜಲೀಸ್‌ನ ಬೀದಿಗಳಲ್ಲಿ ಕುಣಿದು ಕುಪ್ಪಳಿಸಿದ್ದಾಳೆ. ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಇಷ್ಕ್ ಕಮೀನಾಗೆ ದೇಸಿ ಯುವತಿ ಡಾನ್ಸ್ ಮಾಡಿದ್ದಾಳೆ.
ವಿನಿತಾ ಹಜಾರಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಘಾಗ್ರಾ ಚೋಲಿಯನ್ನು ಧರಿಸಿ ಇಷ್ಕ್ ಕಮೀನಾ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಸಖತ್ ಸದ್ದು ಮಾಡುತ್ತಿದೆ.
ಮೊಬೈಲ್ ಖರೀದಿಸಿದರೆ 1 ಲೀ. ಪೆಟ್ರೋಲ್ ಉಚಿತ….! ಬಿಡಿ ಭಾಗ ತೆಗೆದುಕೊಂಡರೂ ಸಿಗುತ್ತೆ 2 ನಿಂಬೆಹಣ್ಣು
ವೈರಲ್ ವಿಡಿಯೋದಲ್ಲಿ, ಯುವತಿಯು ಹಾಲಿವುಡ್ ಬೌಲೆವರ್ಡ್ ರಸ್ತೆಯಲ್ಲಿ ಇಷ್ಕ್ ಕಮೀನಾಗೆ ಸಲೀಸಾಗಿ ನೃತ್ಯ ಮಾಡಿದ್ದಾಳೆ. ಈ ಮೂಲಕ ಹಾಲಿವುಡ್ ಬೌಲೆವರ್ಡ್ ನಲ್ಲಿ ತನ್ನ ಭಾರತೀಯ ಸಿನಿಮಾದ ಮೇಲಿನ ಪ್ರೀತಿಯನ್ನು ತೋರಿಸಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಯುವತಿಯನ್ನು ಕೊಂಡಾಡಿದ್ದಾರೆ. ಹಾಲಿವುಡ್ ಬಿಎಲ್ವಿಡಿಯಲ್ಲಿ ಸ್ಟಾರ್ ಆಗಲು ಯುವತಿ ಅರ್ಹಳು, ಈಕೆ ಬಹಳ ಅದ್ಭುತವಾಗಿ ನೃತ್ಯ ಮಾಡಿದ್ದಾಳೆ ಅಂತೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.