alex Certify ಇವುಗಳಲ್ಲಿದೆ ಮುಖ ʼಸೌಂದರ್ಯʼದ ಒಳಗುಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವುಗಳಲ್ಲಿದೆ ಮುಖ ʼಸೌಂದರ್ಯʼದ ಒಳಗುಟ್ಟು

ಮಳೆಗಾಲದಲ್ಲಿ ತ್ವಚೆ ಸುಕ್ಕುಗಟ್ಟುವುದು ಅಥವಾ ಮುಖದ ಮೇಲೆ ಗೆರೆಗಳು ಮೂಡುವುದು ಸಾಮಾನ್ಯ. ಕೆಲವು ಹಣ್ಣು – ತರಕಾರಿಗಳನ್ನು ಸೇವಿಸುವ ಮೂಲಕ ನೀವು ಇದನ್ನು ತಡೆಗಟ್ಟಬಹುದು.

ಗೆಣಸಿನಲ್ಲಿ ವಿಟಮಿನ್ ಎ ಇದ್ದು ಇದು ಉರಿಯೂತ ಮತ್ತು ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮೊಡವೆ ಕಲೆಗಳೂ ಮಾಯವಾಗುತ್ತವೆ.

ಕುಂಬಳಕಾಯಿ ಬೀಜಗಳಲ್ಲಿ ಜಿಂಕ್ ಸಾಕಷ್ಟಿದೆ. ಇದು ಹೊಸ ಕೋಶಗಳ ಸೃಷ್ಟಿಗೆ ನೆರವಾಗುತ್ತದೆ. ಪ್ರೊಟೀನ್ ಅಂಶವೂ ಇದರಲ್ಲಿ ಸಾಕಷ್ಟಿದ್ದು, ತ್ವಚೆಯ ತೈಲ ಉತ್ಪಾದನೆಯನ್ನು ಇದು ನಿಯಂತ್ರಿಸುತ್ತದೆ. ತ್ವಚೆಗೆ ಹೊಳಪನ್ನೂ ನೀಡುತ್ತದೆ.

ಆ್ಯಪಲ್ ನಲ್ಲಿರುವ ವಿಟಮಿನ್ ಸಿ ತ್ವಚೆಯನ್ನು ಸ್ಥಿರವಾಗಿಟ್ಟು ಹೆಚ್ಚಿನ ಬಣ್ಣ ಪಡೆಯಲು ನೆರವಾಗುತ್ತದೆ. ಚರ್ಮದ ಮೇಲಾದ ಹಾನಿಯನ್ನು ತಡೆಗಟ್ಟಿ ವಯಸ್ಸಾದ ಗುರುತುಗಳನ್ನು ಅಳಿಸಿ ಹಾಕುತ್ತದೆ.

ಬೀಟ್ ರೂಟ್ ಕೂಡಾ ಇದೇ ಲಕ್ಷಣವನ್ನು ಹೊಂದಿದ್ದು ಇದರಲ್ಲಿರುವ ಪ್ರಬಲ ಉತ್ಕರ್ಷಣ ನಿರೋಧಕ ಗುಣದಿಂದಾಗಿ ಅದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಮತ್ತು ವಯಸ್ಸಾದ ಲಕ್ಷಣಗಳನ್ನು ಕಡಿಮೆಗೊಳಿಸಿ ಸುಕ್ಕುಗಳನ್ನು ನಿಯಂತ್ರಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...