ಆರೋಗ್ಯ ಹಾಗೂ ಫಿಟ್ನೆಸ್ ವಿಷಯದಲ್ಲಿ ಜಪಾನಿಗಳು ಮುಂದಿದ್ದಾರೆ. ವಿಶ್ವದ ಉಳಿದ ದೇಶಗಳಿಗೆ ಹೋಲಿಕೆ ಮಾಡಿದ್ರೆ ಜಪಾನ್ ಜನರು ಹೆಚ್ಚು ಆರೋಗ್ಯಕರ ಹಾಗೂ ಫಿಟ್ ಆಗ್ತಿರ್ತಾರೆ. ಇಲ್ಲಿ ಸ್ಥೂಲಕಾಯ ಹೊಂದಿದವರ ಸಂಖ್ಯೆ ಬೆರಳೆಣಿಕೆಯಷ್ಟು ಎಂದ್ರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.
ಅಮೆರಿಕಾದಲ್ಲಿ ಶೇಕಡಾ 35ರಷ್ಟು ಮಂದಿ ಸ್ಥೂಲಕಾಯ ಹೊಂದಿದ್ದರೆ ಜಪಾನ್ ನಲ್ಲಿ ಇದ್ರ ಸಂಖ್ಯೆ ಶೇಕಡಾ 3. ಜಪಾನ್ ಜನರು ತುಂಬಾ ಸುಂದರವಾಗಿದ್ದು, ಆರೋಗ್ಯವಾಗಿರಲು ಅವ್ರ ಜೀವನ ಶೈಲಿಯೇ ಬಹುಮುಖ್ಯ ಕಾರಣ.
ಜಪಾನಿನ ಜನರು ಸಂಸ್ಕರಿಸಿದ ಆಹಾರದಿಂದ ದೂರವಿದ್ದಾರೆ. ತಾಜಾ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಾರೆ. ಸಂಸ್ಕರಿಸಿದ ಆಹಾರದಲ್ಲಿ ತೂಕ ಹೆಚ್ಚಿಸುವ ರಾಸಾಯನಿಕ ವಸ್ತು ಹಾಗೂ ತೈಲ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಜಪಾನಿಗಳು ತಾಜಾ ಆಹಾರ ತಿನ್ನುವುದ್ರಿಂದ ಅವ್ರ ತೂಕ ಅನವಶ್ಯಕವಾಗಿ ಏರುವುದಿಲ್ಲ.
ಜಪಾನಿಗಳ ಆಹಾರದಲ್ಲಿ ಕಡಿಮೆ ಕೊಬ್ಬು ಹಾಗೂ ಹೆಚ್ಚಿನ ಫೈಬರ್ ಅಂಶವಿರುತ್ತದೆ. ಇದು ತೂಕ ನಿಯಂತ್ರಿಸಲು ನೆರವಾಗುತ್ತದೆ.
ಕಡಿಮೆ ತೈಲ ಬಳಸಿದ ಹಾಗೂ ಕಡಿಮೆ ಜ್ವಾಲೆಯಲ್ಲಿ ಬೇಯಿಸಿದ ಅಥವಾ ಉಗಿಯಲ್ಲಿ ಬೇಯಿಸಿದ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡ್ತಾರೆ. ಈ ಆಹಾರದಲ್ಲಿ ಪೌಷ್ಠಿಕಾಂಶ ಹೆಚ್ಚಿದ್ದು, ಕೊಬ್ಬು ಹೆಚ್ಚಾಗುವುದಿಲ್ಲ.
ಜಪಾನಿನ ಜನರು ದಿನದಲ್ಲಿ ಮೂರರಿಂದ ಐದು ಬಾರಿ ಸ್ವಲ್ಪ ಸ್ವಲ್ಪ ಆಹಾರವನ್ನು ಸೇವನೆ ಮಾಡ್ತಾರೆ. ಇದು ಚಯಾಪಚಯ ಹಾಗೂ ಜೀರ್ಣಕ್ರಿಯೆಗೆ ನೆರವಾಗುತ್ತದೆ.
ಹಸಿವಾಗಿದೆ ಅಂತಾ ಹೊಟ್ಟೆ ಬಿರಿಯುವಷ್ಟು ಆಹಾರ ಸೇವನೆ ಮಾಡುವುದಿಲ್ಲ ಜಪಾನಿಗಳು. ಹಾಗೆ ಆರೋಗ್ಯಕರ ಟೀ ಕುಡಿಯುತ್ತಾರೆ.
ಸಣ್ಣ ಪ್ಲೇಟ್ ನಲ್ಲಿ ಆಹಾರ ಹಾಕಿಕೊಂಡು ಅದನ್ನು ನಿಧಾನವಾಗಿ ತಿನ್ನುತ್ತಾರೆ. ಹಾಗೆ ಕ್ಯಾಲೋರಿ ಹೆಚ್ಚು ಮಾಡುವ ಸಿಹಿ ತಿಂಡಿಗಳನ್ನು ತಿನ್ನುವುದಿಲ್ಲ.
ಆರಾಮವಾಗಿ ಕುಳಿತು, ಆರೋಗ್ಯಕರ ಹಾಗೂ ಕಡಿಮೆ ಕ್ಯಾಲೋರಿಯ ಉಪಹಾರವನ್ನು ತಿನ್ನುತ್ತಾರೆ. ಇದ್ರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ತೂಕ ಏರಿಕೆಯಾಗುವುದಿಲ್ಲ. ಬಹುಬೇಗ ಹಸಿವಾಗುವುದಿಲ್ಲ.