ಒಲಿಂಪಿಕ್ ಪದಕ ಮುಡಿಗೇರಿಸಿಕೊಳ್ಳೋದು ಸುಲಭವಲ್ಲ. ಅದಕ್ಕೆ ವಿಶಿಷ್ಟ ಕೌಶಲ್ಯ ಬೇಕು, ಸಮರ್ಪಣಾ ಭಾವದ ಜೊತೆಗೆ ಅದೃಷ್ಟ ಕೂಡ ನಿಮ್ಮ ಜೊತೆಗಿರಬೇಕು. ಅದೆಷ್ಟೋ ಆಟಗಾರರಿಗೆ ಕೊನೆ ಕ್ಷಣದಲ್ಲಿ ಅದೃಷ್ಟವೇ ಕೈಕೊಟ್ಟಿದ್ದೂ ಇದೆ.
ಕೆಲವರು ಭಯಂಕರ ಅಪಘಾತಕ್ಕೀಡಾದ್ರೆ, ಇನ್ನು ಕೆಲವರು ಶೌಚಾಲಯದ ಬಾಗಿಲು ಸ್ಟ್ರಕ್ಕಾಗಿ ಪದಕ ಕಳೆದುಕೊಂಡಿದ್ದೂ ಇದೆ. ಅಂತಹ ಕೆಲ ಆಟಗಾರರ ಕುರಿತು ಇಲ್ಲಿದೆ ವಿವರ.
ಸಮೀರ್ ಐತ್ : ಫ್ರಾನ್ಸ್ ನ ಜಿಮ್ನಾಸ್ಟ್ ಸಮೀರ್, ವಾಲ್ಟ್ ಸ್ಪರ್ಧೆ ವೇಳೆ ಕಾಲನ್ನೇ ಮುರಿದುಕೊಂಡಿದ್ದಾರೆ. ಜಂಪ್ ಮಾಡುವ ಸಂದರ್ಭದಲ್ಲಿ ಅವರ ಕಾಲಿನ ಮೂಳೆಯೇ ಮುರಿದುಹೋಗಿದೆ. ಈ ಹಿಂದೆ ಕೂಡ 3 ಬಾರಿ ಅವರ ಕಾಲು ಫ್ರಾಕ್ಚರ್ ಆಗಿತ್ತು. ರಿಯೋನಲ್ಲೂ ದುರದೃಷ್ಟ ಅವರನ್ನು ಹಿಂಬಾಲಿಸಿತ್ತು.
ಮಿಲ್ಕಾ ಸಿಂಗ್ : ಒಲಿಂಪಿಕ್ಸ್ ನಲ್ಲಿ ಭಾರತದ ಮಿಲ್ಕಾ ಸಿಂಗ್ ವಿಚಿತ್ರ ರೀತಿಯಲ್ಲಿ ಸೋಲುಂಡರು. 400 ಮೀಟರ್ ರೇಸ್ ನಲ್ಲಿ ಎಲ್ಲರಿಗಿಂತ ಮುಂದಿದ್ದ ಮಿಲ್ಕಾ ಸಿಂಗ್, ಗುರಿ ತಲುಪುವ ಸ್ವಲ್ಪ ಮುನ್ನ ಸಹಸ್ಪರ್ಧಿಗಳತ್ತ ತಿರುಗಿ ನೋಡಿದ್ರಿಂದ ಹಿಂದುಳಿಯುವ ಮೂಲಕ ಪದಕ ಕಳೆದುಕೊಂಡ್ರು.
ಸಿಲ್ವಿ ಫ್ರೆಚೆಟ್ಟೆ : 1992ರ ಬಾರ್ಸಿಲೋನಾ ಒಲಿಂಪಿಕ್ಸ್ ನಲ್ಲಿ ಕೆನಡಾದ ಸಿಲ್ವಿ ತೀರ್ಪುಗಾರರು ಮಾಡಿದ ಯಡವಟ್ಟಿನಿಂದ ಪದಕ ವಂಚಿತರಾಗಿದ್ರು. ಸ್ವಿಮ್ಮಿಂಗ್ ವಿಭಾಗದಲ್ಲಿ ತೀರ್ಪುಗಾರರು ತಪ್ಪಾಗಿ ಸ್ಕೋರ್ ಬರೆದುಕೊಂಡಿದ್ರು. ಒಲಿಂಪಿಕ್ಸ್ ನಲ್ಲಿ ಅದನ್ನು ಸರಿಪಡಿಸುವ ಅವಕಾಶವೇ ಇಲ್ಲದೇ ಇದ್ದಿದ್ರಿಂದ ಸಿಲ್ವಿ ನಿರಾಸೆ ಅನುಭವಿಸಬೇಕಾಯ್ತು.
ಜಾನಿ ಕ್ವಿನ್ : ನಿಜಕ್ಕೂ ಇವರೊಬ್ಬ ದುರದೃಷ್ಟವಂತ ಆಟಗಾರ. 2014ರ ವಿಂಟರ್ ಒಲಿಂಪಿಕ್ಸ್ ವೇಳೆ ಎಲವೇಟರ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಜಾನಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.
ಮಿಲೋರಡ್ ಕ್ಯಾವಿಕ್ : ಸರ್ಬಿಯಾದ ಮಿಲೋರಡ್ ಕ್ಯಾವಿಕ್ 2008ರ ಒಲಿಂಪಿಕ್ಸ್ ನಲ್ಲಿ ನಡೆದ 100 ಮೀಟರ್ ಬಟರ್ ಫ್ಲೈ ಸ್ವಿಮ್ಮಿಂಗ್ ನಲ್ಲಿ ಅಮೆರಿಕದ ಫೆಲ್ಫ್ಸ್ ಗೂ ಮೊದಲೇ ಗುರಿ ತಲುಪಿದ್ರು. ಆದ್ರೆ ಫೆಲ್ಪ್ಸ್ ನೀರಿನೊಳಗಿನಿಂದ್ಲೇ ಗೋಡೆಯನ್ನು ಒಂದು ಸೆಕೆಂಡ್ ಮೊದಲು ಮುಟ್ಟಿದ್ರಿಂದ ಮೊದಲ ಸ್ಥಾನ ಅವರ ಪಾಲಾಯ್ತು.