alex Certify ಇವರನ್ನು ಅವಮಾನಿಸಿದ್ರೆ ಜೀವನದಲ್ಲಿ ಎದುರಾಗುತ್ತೆ ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವರನ್ನು ಅವಮಾನಿಸಿದ್ರೆ ಜೀವನದಲ್ಲಿ ಎದುರಾಗುತ್ತೆ ಸಂಕಷ್ಟ

ಹಿರಿಯರನ್ನು ಸದಾ ಗೌರವಿಸಬೇಕು. ಹಿರಿಯರಿಗೆ ಅವಮಾನ ಮಾಡಿದ್ರೆ ಹತ್ತಿರಕ್ಕೆ ಬಂದ ಯಶಸ್ಸು ಕೂಡ ಕೈತಪ್ಪಿ ಹೋಗುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಕೂಡ ಇದನ್ನು ಹೇಳಲಾಗಿದೆ. ಯಾರಿಗೆ ಅವಮಾನ ಮಾಡಿದ್ರೆ ಏನೆಲ್ಲ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ವಿವರಿಸಲಾಗಿದೆ.

ತಾಯಿಗೆ ದೇವರ ಸ್ಥಾನ ನೀಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತಾಯಿಯನ್ನು ಗೌರವಿಸಬೇಕು. ಭಕ್ತಿಯಿಂದ ನೋಡಿಕೊಳ್ಳಬೇಕು. ಎಂದೂ ಆಕೆಯನ್ನು ಅವಮಾನಿಸಬಾರದು. ಅಮ್ಮನ ಸೇವೆ ಮಾಡುವವರಿಗೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ಅದೇ ತಾಯಿಯನ್ನು ಅವಮಾನ ಮಾಡುವ ವ್ಯಕ್ತಿ ಮೇಲೆ ದೇವರು ಮುನಿಸಿಕೊಂಡು ಸದಾ ದುಃಖ ನೀಡ್ತಾನೆ. ಎಷ್ಟು ಪೂಜೆ-ಪುನಸ್ಕಾರ ಮಾಡಿದ್ರೂ ಫಲ ಸಿಗೋದಿಲ್ಲ.

ತಾಯಿಯ ಹಾಗೆ ತಂದೆಯನ್ನು ಗೌರವಿಸಬೇಕು. ತಂದೆ-ತಾಯಿಗೆ ಗೌರವ ನೀಡದವರನ್ನು ಪಶುವಿಗೆ ಹೋಲಿಸಲಾಗುತ್ತದೆ. ಅವರು ಎಂದೂ ಜೀವನದಲ್ಲಿ ಪ್ರಗತಿ ಕಾಣುವುದಿಲ್ಲ.

ಗುರುವಿನಿಂದ ನಮಗೆ ಶಿಕ್ಷೆ ಹಾಗೂ ಜ್ಞಾನ ಲಭಿಸುತ್ತದೆ. ವಿದ್ಯೆ ನೀಡಿದ ಗುರು ದೇವರಿಗೆ ಸಮಾನ. ಗುರುವಿಗೆ ಎಂದೂ ಅವಮಾನ ಮಾಡಬಾರದು. ಗುರುವಿಗೆ ಅಗೌರವ ತೋರುವ ಹಾಗೆ ಅವರು ಹೇಳಿಕೊಟ್ಟ ಶಿಕ್ಷಣಕ್ಕೆ ಅವಮಾನ ಮಾಡಿದ್ರೆ ಜೀವನದಲ್ಲಿ ಅಭಿವೃದ್ಧಿ ಸಾಧ್ಯವೇ ಇಲ್ಲ. ಗುರುವಿಗೆ ಅವಮಾನ ಮಾಡಿದ್ರೆ ಪಾಪ ಸುತ್ತಿಕೊಳ್ಳುತ್ತದೆ. ಇದಕ್ಕೆ ಪ್ರಾಯಶ್ಚಿತವಿಲ್ಲ.

ಪಂಡಿತ ಅಥವಾ ಜ್ಞಾನಿಯನ್ನು ದೇವರಿಗೆ ಹೋಲಿಸಲಾಗುತ್ತದೆ. ಜ್ಞಾನಿ ಎಲ್ಲ ಕಷ್ಟಗಳಿಗೂ ಒಂದು ಪರಿಹಾರ ಕಂಡುಕೊಳ್ಳುತ್ತಾನೆ. ಇಂತಹ ವ್ಯಕ್ತಿಗಳನ್ನು ಅವಮಾನ ಮಾಡುವುದು ಪಾಪದ ಕೆಲಸ. ಇಂತವರನ್ನು ಅವಮಾನ ಮಾಡಿದ ವ್ಯಕ್ತಿಗೆ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಹಾಗಾಗಿ ಜ್ಞಾನಿಗಳು, ಪಂಡಿತರನ್ನು ಸದಾ ಗೌರವಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...