ಬೆಂಗಳೂರಿನ ಜನರು 12-14 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕೆ ಚಳಿ ಚಳಿ ಎಂದು ತತ್ತರಿಸಿ ಹೋಗುತ್ತಾರೆ. ಅಂಥವರು ಒಮ್ಮೆ ಸೈಬೀರಿಯಾದ ಯಾಕುಟ್ಸ್ಕ್ ಮಾರ್ಕೆಟ್ ಪ್ರದೇಶವನ್ನು ನೆನಪಿಸಿಕೊಂಡರೆ ಕೈಕಾಲು ಮರಗಟ್ಟಿ ಹೋಗಬಹುದು. ಏಕೆಂದರೆ ಇಲ್ಲಿನ ತಾಪಮಾನ -55 ಡಿಗ್ರಿ ಸೆಲ್ಸಿಯಸ್..!!!
ಹೌದು….ಅದಕ್ಕೇ ಇದು ಜಗತ್ತಿನ ಅತ್ಯಂತ ಕೋಲ್ಡ್ ಮಾರ್ಕೆಟ್ ಎಂದು ಹೆಸರಾಗಿದೆ. ಇಲ್ಲಿರುವ ಮೀನು, ಮಾಂಸ, ತರಕಾರಿ ಎಲ್ಲವೂ ಥಂಡಿಗೆ ಕಲ್ಲಾಗಿ ಬಿಟ್ಟಿರುತ್ತವೆ. ಇಲ್ಲಿರುವವರು ದಪ್ಪನೆಯ ಶೂ, ಮೈತುಂಬಾ ಬಟ್ಟೆ, ಜರ್ಕಿನ್ ಇಲ್ಲದೆ ಓಡಾಡುವುದು ಕಷ್ಟವೇ ಸರಿ.
ಆದರೂ ಇಲ್ಲಿನ ಜನರು ಮೈಕೊರೆಯವ ಚಳಿ/ಥಂಡಿಯಲ್ಲೂ ಆರಾಮಾಗಿ ಜೀವನ ಸಾಗಿಸುತ್ತಿದ್ದಾರೆ. ವಿಶೇಷವೆಂದರೆ ಇಲ್ಲಿ ವರ್ಷದ ಬಹುತೇಕ ಸಮಯ ಇದೇ ರೀತಿ ವಾತಾವರಣ ಇರುತ್ತದೆ. ಇನ್ನೊಂದು ವಿಚಿತ್ರ ಎಂದರೆ ಈ ಸ್ಥಳದಲ್ಲಿ, ಬೇಸಿಗೆಯಲ್ಲಿನ ಉಷ್ಣಾಂಶವೇ -40 ಡಿಗ್ರಿ ಸೆಲ್ಸಿಯಸ್ ಅಂತೆ.