ಕೊರೊನಾದಿಂದಾಗಿ ಜಗತ್ತಿನ ಹಲವು ದೇಶಗಳಲ್ಲಿ ನಿರುದ್ಯೋಗ ತಾಂಡವವಾಡ್ತಿದೆ. ಸಣ್ಣ ಸಣ್ಣ ನಗರಗಳಲ್ಲಿ ಕೂಡ ಪ್ರಾಪರ್ಟಿಗಳ ಬೆಲೆ ಕಡಿಮೆಯಾಗಿದೆ. ಮನೆಗಳು ಕೂಡ ಅಗ್ಗದ ಬೆಲೆಗೆ ಸಿಗ್ತಾ ಇವೆ. ಇದೇ ಕಾರಣಕ್ಕೆ ಫ್ಲ್ಯಾಟ್, ಮನೆಯನ್ನೆಲ್ಲ ಮಾಲೀಕರು ಅರ್ಧ ಬೆಲೆಗೂ ಮಾರಾಟ ಮಾಡಲು ಸಿದ್ಧವಾಗಿದ್ದಾರೆ.
ಇಟಲಿಯಲ್ಲೂ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ದೇಶಗಳಲ್ಲಿ, ಸ್ಥಳೀಯ ಆಡಳಿತವು ಕೆಲವು ಷರತ್ತುಗಳೊಂದಿಗೆ ಹಳೆಯ ಮನೆಗಳನ್ನು ಒಂದು ಡಾಲರ್ ಅಥವಾ ಒಂದು ಯೂರೋಗೆ ಮಾರಾಟ ಮಾಡುವ ಯೋಜನೆಯನ್ನು ಪರಿಚಯಿಸಿದೆ. ಬ್ರಿಟನ್‌ನಲ್ಲಿ ನೆಲೆಸಿರುವ ಆಸ್ಟ್ರೇಲಿಯಾ ಮೂಲದ ವ್ಯಕ್ತಿಯೊಬ್ಬ ಇಟಲಿಯ ಸಿಸಿಲಿಯ ಮುಸ್ಸೋಮೆಲಿ ಎಂಬಲ್ಲಿ ಕೇವಲ ಒಂದು ಯೂರೋ ಅಂದ್ರೆ 85 ರೂಪಾಯಿ ಕೊಟ್ಟು ಪುಟ್ಟ ಮನೆಯೊಂದನ್ನು ಖರೀದಿಸಿದ್ದಾನಂತೆ.
ಆ ಮನೆಯನ್ನು ಕೊಂಡುಕೊಳ್ಳಲು ಈಗ ಖರೀದಿದಾರರು ಮುಗಿಬಿದ್ದಿದ್ದಾರೆ. ಷರತ್ತಿನ ಪ್ರಕಾರ ಆ ಹಳೆಯ ಮನೆಯನ್ನು ಆತ ಮೂರು ವರ್ಷಗಳೊಳಗೆ ನವೀಕರಣ ಮಾಡಬೇಕಿತ್ತು. ಆದ್ರೆ ಆತನಿಗೆ ಕಾರ್ಮಿಕರೇ ಸಿಗದೇ ಇದ್ದಿದ್ರಿಂದ ಮನೆಯ ನವೀಕರಣ ಸಾಧ್ಯವಾಗಲೇ ಇಲ್ಲ. ಹಾಗಾಗಿ ಅದನ್ನು ಮಾರಾಟ ಮಾಡಲು ಡ್ಯಾನಿ ಮುಂದಾಗಿದ್ದಾರೆ. ಡ್ಯಾನಿ ಮೆಕ್‌ಕಬ್ಬಿನ್ ಎಂಬಾತ ಸಿಸಿಲಿಯ ಕ್ಯಾಲ್ಟಾನಿಸೆಟ್ಟಾ ಪ್ರಾಂತ್ಯದಲ್ಲಿರುವ ಮುಸೊಮೆಲಿ ಪಟ್ಟಣದಲ್ಲಿ ಮನೆಯನ್ನು ಖರೀದಿಸಿದ್ದರು.
ಪ್ರಸ್ತುತ, ಈ ಸ್ಥಳದಲ್ಲಿ ವಿದೇಶಿಯರು ನೆಲೆಸಲು ‘ಕೇಸ್ 1 ಯುರೋ’ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ, ಮೆಕ್‌ಕ್ಯೂಬಿನ್ ಅವರು ಒಂದು ಯೂರೋ (ಸುಮಾರು 85 ರೂಪಾಯಿ) ಗೆ ಇಲ್ಲಿ ಮನೆಯನ್ನು ಖರೀದಿಸಿದರು. ಈ ಮನೆ ಕೊಳ್ಳುವ ಮುನ್ನ ಡ್ಯಾನಿ 17 ವರ್ಷಗಳ ಕಾಲ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದರು. ಕಳೆದ ಹಲವು ತಿಂಗಳುಗಳಿಂದ ಇಟಲಿಯಲ್ಲಿ ಕಾರ್ಮಿಕರ ಕೊರತೆ ಕಾಡ್ತಾ ಇದೆ.
ಮನೆ ಖರೀದಿಸಿ ವರ್ಷ ಕಳೆದರೂ ನವೀಕರಿಸಲು ಕಾರ್ಮಿಕರು ಸಿಗಲಿಲ್ಲ. ಪರಿಣಾಮ ಡ್ಯಾನಿ ಆಸ್ತಿಯನ್ನು ಮಾರಾಟ ಮಾಡಬೇಕಾಯಿತು. ಮನೆ ನವೀಕರಣ ಮಾಡಲು ಬಿಲ್ಡರ್‌ಗಳು ಸಿಗದೇ ಇದ್ದಿದ್ರಿಂದ ಅದನ್ನು ಮಾರಾಟ ಮಾಡಲು ಅವರು ಮುಂದಾಗಿದ್ದಾರೆ.