ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದ್ದು 25 ಲಕ್ಷಕ್ಕೂ ಅಧಿಕ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರವಾಹಕ್ಕೆ ಈಗಾಗಲೇ 122 ಮಂದಿ ಬಲಿಯಾಗಿದ್ದು, ಇನ್ನು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಆಸ್ಪತ್ರೆಗೆ ಹೋಗಲಾಗದೆ ಪರಿತಪಿಸುತ್ತಿದ್ದಾರೆ.
ಇದರ ಮಧ್ಯೆ ಆಹಾರ ಹಾಗೂ ನೀರಿನ ಕೊರತೆ ಎದುರಾಗಿದ್ದು ಹೆಲಿಕಾಪ್ಟರ್ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಹಾರದ ಪೊಟ್ಟಣ ಹಾಗೂ ನೀರಿನ ಬಾಟಲಿಗಳನ್ನು ನೀಡಲಾಗುತ್ತಿದೆ. ಇಷ್ಟಾದರೂ ಸಹ ಬಹುತೇಕ ಜನರಿಗೆ ಇದು ತಲುಪುತ್ತಿಲ್ಲ ಎನ್ನಲಾಗಿದೆ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು 20 ರೂ. ಬೆಲೆಬಾಳುವ ನೀರಿನ ಬಾಟಲಿಯನ್ನು 100ರಿಂದ 150 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಅನಿವಾರ್ಯವಾಗಿರುವ ಕಾರಣ ಪೆಟ್ರೋಲ್ ಗಿಂತ ದುಬಾರಿಯಾಗಿರುವ ನೀರಿನ ಬಾಟಲ್ ಅನ್ನು ಜನ ಕೊಂಡುಕೊಳ್ಳುವಂತಾಗಿದೆ.