ಲಿಪ್‌ಸ್ಟಿಕ್ ಮುಖದ ಅಂದವನ್ನು ಹೆಚ್ಚಿಸುವುದರಲ್ಲಿ ಎರಡನೇ ಮಾತಿಲ್ಲ. ಬೇರೆ ಯಾವ ಸೌಂದರ್ಯ ಸಾಧನಗಳು ಇಲ್ಲದೆ ಹೋದರೂ, ಕೇವಲ ಲಿಪ್‌ಸ್ಟಿಕ್ ಹಚ್ಚಿಕೊಂಡರೆ ಸುಂದರವಾಗಿ ಕಾಣುತ್ತೇವೆ ಅನ್ನುವುದು ಮಹಿಳೆಯರ ನಂಬಿಕೆ. ಇಂತಹ ಲಿಪ್‌ಸ್ಟಿಕ್ ಕೇವಲ ತುಟಿಗಳಿಗೆ ಅಷ್ಟೇ ಅಲ್ಲದೆ ಇನ್ನಿತರ ರೀತಿಯಲ್ಲಿಯೂ ಬಳಕೆಯಾಗುತ್ತದೆ. ಅದು ಹೇಗೆ ಗೊತ್ತಾ.
* ಲಿಪ್‌ಸ್ಟಿಕ್ ಕ್ರೀಮ್ ಬ್ಲಷರ್ ಆಗಿ ಕೂಡ ಕೆಲಸ ಮಾಡುತ್ತದೆ. ಸರಿಯಾದ ಮ್ಯಾಚಿಂಗ್ ಬ್ಲಷರ್ ಇಲ್ಲದೇ ಹೋದಾಗ ಲಿಪ್‌ಸ್ಟಿಕ್ ಅನ್ನೇ ಬ್ಲಷರ್ ಆಗಿ ಬಳಸಿಕೊಳ್ಳಬಹುದು. ಹೆಚ್ಚು ಸಮಯ ಬ್ಲಷರ್ ಮುಖದಲ್ಲಿ ಉಳಿಯಬೇಕಾದರೆ ಈ ಮೆಥೆಡ್ ಅನುಸರಿಸಬಹುದು.
* ಪಿಂಕ್ ಮತ್ತು ರೆಡ್ ಲಿಪ್‌ಸ್ಟಿಕ್ ಗಳು ಬೆಸ್ಟ್ ಐ ಶ್ಯಾಡೋಗಳಾಗಿ ಸಹಾಯಕ್ಕೆ ಬರುತ್ತವೆ. ಒಂದು ವೇಳೆ ಪರ್ಸ್ ನಲ್ಲಿ ಐ ಶ್ಯಾಡೋ ಇಲ್ಲದೆ ಹೋದರೂ ಲಿಪ್‌ಸ್ಟಿಕ್ ಅನ್ನೇ ಬಳಸಬಹುದು.
* ಖಾಲಿಯಾದ ಅಥವಾ ಸ್ವಲ್ಪ ಉಳಿದ ಲಿಪ್‌ಸ್ಟಿಕ್ ಅನ್ನು ಎಸೆಯುವ ಬದಲು ಸ್ವಲ್ಪ ವ್ಯಾಸಲಿನ್ ಜೊತೆ ಮಿಕ್ಸ್ ಮಾಡಿ ಲಿಪ್ ಗ್ಲಾಸ್ ಆಗಿ ಬಳಸಬಹುದು.
* ತಾತ್ಕಾಲಿಕವಾಗಿ ಟ್ಯಾಟೋಗಳನ್ನು ಮುಚ್ಚಬೇಕೆಂದರೆ ರೆಡ್ ಲಿಪ್‌ಸ್ಟಿಕ್ ನಿಂದ ಟ್ಯಾಟೋವನ್ನು ಕವರ್ ಮಾಡಿ ಪೌಡರ್ ಸವರಿದರೆ ಚರ್ಮದ ಮೇಲೆ ಟ್ಯಾಟೋ ಕಾಣುವುದಿಲ್ಲ.
* ಕೆನ್ನೆ, ಹಣೆ ಮತ್ತು ಗಲ್ಲದ ಭಾಗವನ್ನು ಹೈಲೈಟ್ ಮಾಡಿಕೊಳ್ಳಬೇಕೆಂದರೆ ಹೈಲೈಟರ್ ಆಗಿ ನ್ಯೂಟ್ರಲ್ ಶೇಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.