ವಿಶ್ವದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಸಂಪ್ರದಾಯ, ಪದ್ಧತಿಗಳಿವೆ. ಮದುವೆ ಆಚರಣೆ ಕೂಡ ಬೇರೆ ಬೇರೆಯಾಗಿದೆ. ಮದುವೆ ಹೆಸರಲ್ಲಿ ಅನುಸರಿಸುವ ಕೆಲವು ಆಚರಣೆಗಳು ದಂಗಾಗಿಸುವಂತಿವೆ.
ಬ್ರೆಜಿಲ್ ನಲ್ಲಿ ವರನ ಟೈ ಕತ್ತರಿಸಲಾಗುತ್ತದೆ. ಇದು ಅಲ್ಲಿನ ಪದ್ಧತಿ. ಮದುವೆ ನಂತ್ರ ಕತ್ತರಿಸಿದ ಟೈಯನ್ನು ಎಲ್ಲರಿಗೂ ಹಂಚಲಾಗುತ್ತದೆ.
ಸ್ಪೇನ್ ನಲ್ಲಿ ಕೂಡ ಅನನ್ಯ ಪದ್ಧತಿ ಜಾರಿಯಲ್ಲಿದೆ. ಈ ಹಿಂದೆ ಮದುವೆ ವೇಳೆ ಅಕ್ಕಿಯನ್ನು ವಧು-ವರರ ಮೇಲೆ ಹಾಕಲಾಗುತ್ತಿತ್ತು. ಭಾರತದಲ್ಲಿಯೂ ಈ ಪದ್ಧತಿಯಿದೆ. ಆದ್ರೆ ಈಗ ಅನ್ನದ ಮಹತ್ವ ಅರಿತಿರುವ ಅಲ್ಲಿಯ ಜನರು ಅಕ್ಕಿ ಬದಲು ಹೂ ಬಳಸುತ್ತಿದ್ದಾರೆ.
ಮೆಕ್ಸಿಕೋದಲ್ಲಿ ಮದುವೆ ವೇಳೆ ಹಾಡು ಹೇಳಲಾಗುತ್ತದೆ. ಹಾಡು ಹೇಳದೆ ಯಾರ ಮದುವೆಯೂ ನಡೆಯುವುದಿಲ್ಲ. ಇದೊಂದು ಆಟದ ರೀತಿಯಲ್ಲಿದ್ದು, ಇದನ್ನು ‘ದಿ ಸೀ ಸ್ನೇಕ್’ ಎಂದು ಕರೆಯಲಾಗುತ್ತದೆ.
ಜಪಾನ್ ನಲ್ಲಿ ಮದುವೆ ವೇಳೆ ಹಣ ನೀಡುವ ಪದ್ಧತಿಯಿದೆ. ಈ ಪದ್ಧತಿ ಭಾರತದಲ್ಲೂ ಇದೆ. ಆದ್ರೆ ಜೋಡಿ ನಡುವೆ ಎಷ್ಟು ಆಪ್ತತೆ ಇದೆ ಎಂಬುದನ್ನು ನೋಡಿ ಜಪಾನ್ ನಲ್ಲಿ ಹಣ ನಿರ್ಧಾರವಾಗುತ್ತದೆ.