ಸುಂದರವಾಗಿ ಕಾಣಲು ಹುಡುಗಿಯರು ಏನೆಲ್ಲ ಕಸರತ್ತು ಮಾಡ್ತಾರೆ. ಸೌಂದರ್ಯ ವರ್ಧಕ, ಬ್ಯೂಟಿ ಪಾರ್ಲರ್ ಹೀಗೆ ಸೌಂದರ್ಯ ಹೆಚ್ಚಿಸಿಕೊಳ್ಳಲು ಕೈಲಾದಷ್ಟು ಪ್ರಯತ್ನ ಮಾಡ್ತಾರೆ. ಆದ್ರೆ ಈ ದೇಶದಲ್ಲಿ ಹುಡುಗಿಯರು ಸುಂದರವಾಗಿ ಕಾಣಲು ಕುಟುಂಬಸ್ಥರು ಮಾಡುವ ಕೆಲಸ ದಂಗಾಗಿಸುತ್ತದೆ.
ಇಥಿಯೋಪಿಯಾದಲ್ಲಿ ವಿಚಿತ್ರ ಪದ್ಧತಿಯಿದೆ. ಸುರಮಾ ಬುಡಕಟ್ಟು ಜನಾಂಗದಲ್ಲಿ ಮಹಿಳೆಯರು ಸುಂದರವಾಗಿ ಕಾಣಬೇಕು ಎನ್ನುವ ಕಾರಣಕ್ಕೆ ಬ್ಲೇಡ್ ನಲ್ಲಿ ಕತ್ತರಿಸಲಾಗುತ್ತದೆ. ದೇಹದ ಮೇಲೆ ಬ್ಲೇಡ್ ಬರೆ ಇದ್ರೆ ಮಕ್ಕಳು ಸುಂದರವಾಗಿ ಕಾಣ್ತಾರೆಂಬ ನಂಬಿಕೆ ಅವ್ರದ್ದು.
ಬ್ಲೇಡ್ ಮೂಲಕ ದೇಹದ ಮೇಲೆ ಬೇರೆ ಬೇರೆ ಡಿಸೈನ್ ಮಾಡಲಾಗುತ್ತದೆ. ಹೀಗೆ ಮಾಡಿದ್ರೆ ಮಹಿಳೆಯರು ಸುಂದರವಾಗಿ ಕಾಣ್ತಾರೆ ಎಂಬ ನಂಬಿಕೆ ಅವ್ರದ್ದು. ಹುಡುಗಿಯರು ಈ ನೋವನ್ನು ಕಣ್ಣು ಮುಚ್ಚಿ ಸ್ವೀಕರಿಸುತ್ತಾರೆ. ಒಳ್ಳೆ ಪತ್ನಿಯಾಗಬೇಕೆಂಬ ಉದ್ದೇಶಕ್ಕೆ ಮಹಿಳೆಯರು ನೋವನ್ನು ಸಹಿಸಿಕೊಳ್ತಾರೆ. ಇಲ್ಲಿನ ಪುರುಷರು ಬ್ಲೇಡ್ ಗುರುತು ಹೊಂದಿರದ ಹುಡುಗಿಯರನ್ನು ಇಷ್ಟಪಡುವುದಿಲ್ಲ.