alex Certify ಇಲ್ಲಿದೆ 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಕರಡು ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಕರಡು ಪಟ್ಟಿ

ಬೆಂಗಳೂರು: 2022ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜೆಗಳ ಕರಡು ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ನೂತನ ವರ್ಷದಲ್ಲಿ ಎಷ್ಟು ರಜೆಗಳಿರಲಿವೆ ಎಂಬುದು ಬಳಿಕ ಅಂತಿಮವಾಗಲಿದೆ.

2022ರ ಸಾರ್ವತ್ರಿಕ ರಜೆಗಳ ಬಗ್ಗೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮೊಹಮ್ಮದ್ ನಯೀಮ್ ಮೊಮಿನ್ ಅವರು ಆರ್ ಬಿಐ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಅವರಿಗೆ ಪತ್ರದಲ್ಲಿ ತಿಳಿಸಿದ್ದು, ನೆಗೋಷಿಯೆಬಲ್ ಇನ್ ಸ್ಟ್ರುಮೆಂಟ್ ಆಕ್ಟ್ ಅಡಿಯಲ್ಲಿ ರಜೆಗಳನ್ನು ಘೋಷಿಸಲಾಗಿದೆ.

2022 ರ ಕರಡು ರಜಾ ಪಟ್ಟಿ ಹೀಗಿದೆ:

ದಿನಾಂಕ 15-01-2022 – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ

ದಿನಾಂಕ 26-01-2021 – ಗಣರಾಜ್ಯೋತ್ಸವ ದಿನ

ದಿನಾಂಕ 01-03-2022 – ಮಹಾ ಶಿವರಾತ್ರಿ

ದಿನಾಂಕ 02-04-2022 – ಯುಗಾದಿ

ದಿನಾಂಕ 14-04-2022 – ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ

ದಿನಾಂಕ 15-04-2022 – ಗುಡ್ ಪ್ರೈಡೆ

ದಿನಾಂಕ 03-05-2022 – ಬಸವ ಜಯಂತಿ, ಅಕ್ಷಯ ತೃತೀಯ, ಕುತುಬ್ ಇ ರಂಜಾನ್

ದಿನಾಂಕ 09-08-2022 – ಮೊಹರಂ ಕೊನೆಯ ದಿನ

ದಿನಾಂಕ 15-08-2022 – ಸ್ವಾತಂತ್ರ್ಯ ದಿನಾಚರಣೆ

ದಿನಾಂಕ 31-08-2022 – ಗಣೇಶ ಚತುರ್ಥಿ

ದಿನಾಂಕ 04-10-2022 – ಮಹಾನವಮಿ, ಆಯುಧ ಪೂಜಾ

ದಿನಾಂಕ 05-10-2022 – ವಿಜಯ ದಶಮಿ

ದಿನಾಂಕ 24-10-2022 – ನರಕ ಚತುರ್ಥಿ

ದಿನಾಂಕ 26-10-2022 – ಬಲಿ ಪಾಡ್ಯಮಿ, ದೀಪಾವಳಿ

ದಿನಾಂಕ 01-11-2022 – ಕನ್ನಡ ರಾಜ್ಯೋತ್ಸವ

ದಿನಾಂಕ 11-11-2022 – ಕನಕದಾಸ ಜಯಂತಿ

ಇನ್ನು ಭಾನುವಾರಗಳಂದು ಬರುವ ಕಾರ್ಮಿಕ ದಿನ, ಬಕ್ರಿದ್, ಮಹಾಲಯ ಅಮವಾಸ್ಯೆ, ಗಾಂಧಿ ಜಯಂತಿ, ಮಹರ್ಷಿ ವಾಲ್ಮೀಕಿ ಜಯಂತಿ, ಈದ್ ಮಿಲಾದ್ ಮತ್ತು ಕ್ರಿಸ್ ಮಸ್ ರಜೆಗಳನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...