ಬೇಕಾಗುವ ಸಾಮಾಗ್ರಿಗಳು : ನೆನೆಸಿ ಮೊಳಕೆ ತರಿಸಿದ ಹೆಸರು ಕಾಳು ಒಂದು ಕಪ್, ಹೆಚ್ಚಿದ ಈರುಳ್ಳಿ ಅರ್ಧ ಕಪ್, ಸಣ್ಣಗೆ ಹೆಚ್ಚಿದ ಟೊಮ್ಯಾಟೋ ಅರ್ಧ ಕಪ್, ತುರಿದ ಕ್ಯಾರೇಟ್ ಅರ್ಧ ಕಪ್, ಚೌಚೌ ಅರ್ಧ ಕಪ್, ಹಸಿ ಮೆಣಸು 2, ಕತ್ತರಿಸಿದ ಕೊತ್ತಂಬರಿ ಸೊಪ್ಪು ಎರಡು ಸ್ಪೂನ್, ಕರಿಬೇವು 6ರಿಂದ 8 ಎಲೆಗಳು, ಚಾಟ್ ಮಸಾಲ ಅರ್ಧ ಚಮಚ, ಉಪ್ಪು ಮತ್ತು ಲಿಂಬು ರಸ, ಒಂದು ಚಮಚ ಎಣ್ಣೆ
ಮಾಡುವ ವಿಧಾನ : ಮೊದಲು ನೆನೆಸಿಟ್ಟ ಹೆಸರು ಕಾಳನ್ನು ಬಾಣಲೆಗೆ ಹಾಕಿ ಅದಕ್ಕೆ ಎಣ್ಣೆ ಮತ್ತು ಚಿಟಿಕೆ ಉಪ್ಪು ಹಾಕಿ ಸ್ವಲ್ಪ ಬಾಡಿಸಿಕೊಂಡು ಪಕ್ಕಕ್ಕಿಡಿ. ನಂತರ ಮಿಕ್ಸರ್ ಜಾರ್ ಗೆ ಹಸಿ ಮೆಣಸು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, ಚಕ್ಕೆ ಮತ್ತು ಚಾಟ್ ಮಸಾಲ ಎಲ್ಲವನ್ನೂ ಹಾಕಿ ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ.
ಈ ಮೊದಲು ಬಾಣಲೆಯಲ್ಲಿ ಸ್ವಲ್ಪ ಬಾಡಿಸಿಟ್ಟುಕೊಂಡಿದ್ದ ಹೆಸರು ಕಾಳಿಗೆ ಮಿಕ್ಸರ್ ಜಾರ್‌ನಲ್ಲಿದ್ದ ಮಸಾಲಾ ಪೇಸ್ಟ್ ನ್ನ ಮಿಶ್ರಣ ಮಾಡಿ ಹಸಿ ವಾಸನೆ ಹೋಗುವ ತನಕ ಮತ್ತೊಮ್ಮೆ ಸ್ವಲ್ಪ ಬಾಡಿಸಿ. ಅದು ಬಿಸಿ ಇರುವಾಗಲೇ ತಟ್ಟೆಗೆ ಹಾಕಿ ಅದರ ಮೇಲೆ ಹೆಚ್ಚಿದ ಈರುಳ್ಳಿ, ತುರಿದು ಇಟ್ಟುಕೊಂಡಿದ್ದ ಕ್ಯಾರೇಟ್, ಹೆಚ್ಚಿದ ಟೊಮೇಟೋ ಎಲ್ಲವನ್ನೂ ಹಾಕಿ, ಸ್ವಲ್ಪ ಲಿಂಬೂ ರಸ ಸಿಂಪಡಿಸಿ, ಚೌಚೌ ಅನ್ನೂ ಹಾಕಿ ಸರ್ವ್ ಮಾಡಿದರೆ, ರುಚಿ ರುಚಿಯಾದ ಹೆಸರು ಕಾಳು ಚಾಟ್ಸ್ ಸವಿಯಲು ರೆಡಿ..!