ಸಂಜೆಯ ಸ್ನ್ಯಾಕ್ಸ್ ಗೆ ಮನೆಯಲ್ಲಿ ಮಾಡಿಕೊಂಡು ಸವಿಯಿರಿ ಕಚೋರಿ. ಮಾಡುವ ವಿಧಾನ ಕೂಡ ಸುಲಭವಿದೆ. ½ ಕಪ್ ಹೆಸರು ಬೇಳೆಯನ್ನು ತೆಗೆದುಕೊಂಡು ಅದನ್ನು 2 ಸಲ ಚೆನ್ನಾಗಿ ತೊಳೆಯಿರಿ. ನಂತರ ಒಂದು ಬೌಲ್ ಗೆ 2 ಕಪ್ ನೀರು ಹಾಕಿಕೊಂಡು ಅದನ್ನು 2 ಗಂಟೆಗಳ ಕಾಲ ನೆನೆಸಿಡಿ. ನಂತರ ಹೆಸರು ಬೇಳೆಯ ನೀರನ್ನು ಬಸಿದುಕೊಂಡು ಒಂದು ಮಿಕ್ಸಿ ಜಾರಿನಲ್ಲಿ ಹೆಸರು ಬೇಳೆಯನ್ನು ಒಂದು ಸುತ್ತು ರುಬ್ಬಿಕೊಳ್ಳಿ.
ಸಲೀಸಾಗಿ ಕಬ್ಬಿಣದ ಬೇಲಿ ದಾಟಿದ ಕಾಡಾನೆ: ವಿಡಿಯೋ ವೈರಲ್
ನಂತರ ಒಂದು ಬೌಲ್ ಗೆ 2 ಕಪ್ ಮೈದಾ ಹಾಕಿ ಅದಕ್ಕೆ ½ ಟೀ ಸ್ಪೂನ್ ಉಪ್ಪು, 4 ಟೀ ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿಕೊಂಡು ನಾದಿಕೊಳ್ಳಿ. ನಂತರ ಇದರ ಮೇಲೆ ಒಂದು ಒದ್ದೆ ಬಟ್ಟೆ ಮುಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಇಟ್ಟುಬಿಡಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ನಂತರ ಚಿಟಿಕೆ ಇಂಗು, ½ ಟೀ ಸ್ಪೂನ್ ಜೀರಿಗೆ, 1/2 ಟೀ ಸ್ಪೂನ್ ಸೋಂಪು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಇದಕ್ಕೆ 1 ಟೀ ಸ್ಪೂನ್ ಶುಂಠಿ ತುರಿ, 2 ಹಸಿಮೆಣಸು ಸಣ್ಣಗೆ ಹಚ್ಚಿಕೊಂಡಿದ್ದು ಹಾಕಿ ಫ್ರೈ ಮಾಡಿ. ನಂತರ 1 ಟೀ ಸ್ಪೂನ್ ಖಾರದಪುಡಿ, ½ ಟೀ ಸ್ಪೂನ್ ಗರಂ ಮಸಾಲ ಸೇರಿಸಿ. ಆಮೇಲೆ 5 ಚಮಚ ಕಡಲೆಹಿಟ್ಟು ಹಾಕಿ ಇದು ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಆಮೇಲೆ ತರಿತರಿಯಾಗಿ ರುಬ್ಬಿಕೊಂಡ ಹೆಸರು ಬೇಳೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
‘ಮನಿಕೆ ಮಗೆ ಹಿತೆ’ ಗೆ ನೃತ್ಯ ಮಾಡಿದ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ: ವಿಡಿಯೋ ವೈರಲ್
ನಂತರ ಗ್ಯಾಸ್ ಆಫ್ ಮಾಡಿ ಇದನ್ನು ತಣ್ಣಗಾಗಲು ಬಿಡಿ. ನಂತರ ನಾದಿಟ್ಟುಕೊಂಡ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಚಿಕ್ಕ ಚಿಕ್ಕ ಚಪಾತಿ ರೀತಿ ಮಾಡಿಕೊಳ್ಳಿ. ಇದರ ಮಧ್ಯೆ 1 ಚಮಚ ಮಾಡಿಟ್ಟುಕೊಂಡ ಹೆಸರುಬೇಳೆ ಮಸಾಲ ಸೇರಿಸಿ ಮತ್ತೆ ಉಂಡೆ ಕಟ್ಟಿ ನಿಧಾನಕ್ಕೆ ಲಟ್ಟಿಸಿಕೊಳ್ಳಿ. ಗ್ಯಾಸ್ ಮೇಲೆ ಎಣ್ಣೆ ಇಟ್ಟು ಸಣ್ಣ ಉರಿಯಲ್ಲಿ ಇದನ್ನು ಕರಿಯಿರಿ.