ಅಡುಗೆಗೆ ರುಚಿ ಕೊಡುವ ಹುಣಸೆ ಹಣ್ಣು ನಮ್ಮ ದೇಹಕ್ಕೂ ಹಲವಾರು ಲಾಭಗಳನ್ನು ಮಾಡುತ್ತದೆ. ಈ ಹುಣಸೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಮತ್ತು ಕರಗಿರುವ ನಾರಿನಿಂದಾಗಿ ದೇಹದಲ್ಲಿರುವ ಕೆಟ್ಟ ಕೊಬ್ಬು ಕಡಿಮೆಯಾಗುತ್ತದೆ. ಹೃದಯ ಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತದೆ.
ಹೈಡ್ರೋಸ್ ಸಿಟ್ರಿಕ್ ಆಮ್ಲ ಎಂಬ ಮುಖ್ಯವಾದ ಪೋಷಕಾಂಶ ಇದ್ದು, ಇದು ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ. ಹುಣಸೆ ಹಣ್ಣಿನಲ್ಲಿ ಕಬ್ಬಿಣ ಮತ್ತು ಪೊಟ್ಯಾಷಿಯಂ ಅಂಶ ಉತ್ತಮ ಪ್ರಮಾಣದಲ್ಲಿ ಇರುವ ಕಾರಣ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
ಒಂದು ಚಿಕ್ಕ ಲೋಟ ಹುಳಿಯನ್ನು ಬೆರೆಸಿದ ನೀರನ್ನು ಕುಡಿದರೆ ಮಧುಮೇಹವನ್ನು ನಿಯಂತ್ರಿಸಬಹುದು. ಹುಣಸೆ ಹಣ್ಣಿನಲ್ಲಿರುವ ಪೊಟ್ಯಾಷಿಯಮ್ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.