alex Certify ಇಲ್ಲಿದೆ ಹಿಮ್ಮಡಿಯ ʼಸೌಂದರ್ಯʼಕ್ಕೆ ಸರಳ ಮಾರ್ಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಹಿಮ್ಮಡಿಯ ʼಸೌಂದರ್ಯʼಕ್ಕೆ ಸರಳ ಮಾರ್ಗ

ಪಾದ ಸುಂದರವಾಗಿಟ್ಟುಕೊಳ್ಳಬೇಕೆಂಬುದು ಎಲ್ಲರ ಬಯಕೆಯೂ ಹೌದು. ಅದರೆ ಬೇಸಿಗೆಯಲ್ಲಿ, ಚಳಿಗಾಲದಲ್ಲಿ ಪಾದದ ಹಿಮ್ಮಡಿ ಬಿರುಕುಬಿಟ್ಟು ಅಸಹ್ಯವಾಗಿ ಕಾಣುವುದು ಬಹು ಜನರ ಬಯಕೆಯೂ ಹೌದು.

ಇನ್ನು ಒಡೆದ ಹಿಮ್ಮಡಿಯನ್ನು ಮರೆಮಾಚಲು ಸಾಕ್ಸ್ ಧರಿಸಿ ಓಡಾಡಬೇಕಿಲ್ಲ. ಯಾಕೆಂದಿರಾ? ಇಲ್ಲಿದೆ ಸರಳ ಸುಲಭ ಸಲಹೆಗಳು:

ಮಾರುಕಟ್ಟೆಯಲ್ಲಿ ಸಿಗುವ ಪೆಟ್ರೋಲಿಯಂ ಜೆಲ್ ಗಳು, ಮಾಯಿಶ್ಚರೈಸರ್ ಗಳು ಉತ್ತಮ ಪ್ರಭಾವವನ್ನೇ ಬೀರುತ್ತವೆ. ಅವುಗಳನ್ನು ಬಳಸದೆಯೂ ಕಾಲಿನ ಒಡೆದ ಹಿಮ್ಮಡಿ ಸಮಸ್ಯೆಯಿಂದ ಬಚಾವಾಗಬಹುದು.

ಮಲಗುವ ಮುನ್ನ ಕಾಲಿನ ಹಿಮ್ಮಡಿಯನ್ನು ಸ್ವಚ್ಛವಾಗಿ ತೊಳೆದು ಬೆಣ್ಣೆಯನ್ನು ಹಚ್ಚಿ. ಮಲಗುವಾಗ ಬೆಡ್ ಶೀಟ್ ಗೆ ತಾಕದಂತೆ ಮಾಡಲು ಕಾಲು ಚೀಲ ಧರಿಸಿ ಇಲ್ಲವೇ, ಸ್ವಲ್ಪ ಹೊತ್ತು ಮೇಲೆತ್ತಿ ಇಟ್ಟುಕೊಳ್ಳಿ.

ಎರಡು ಚಮಚ ಅಕ್ಕಿಹಿಟ್ಟು, ಒಂದು ಚಮಚ ಜೇನು ಹಾಗೂ ವಿನೆಗರ್ ಸೇರಿಸಿ ಮಿಶ್ರಣ ತಯಾರಿಸಿ. ಕಾಲಿನ ಹಿಮ್ಮಡಿಗೆ ಹಚ್ಚಿ 20 ನಿಮಿಷಗಳ ಬಳಿಕ ಉಗುರುಬೆಚ್ಚಗಿನ ನೀರಿನಲ್ಲಿ ಕಾಲಿಟ್ಟು ಹತ್ತು ನಿಮಿಷಗಳ ಬಳಿಕ ಒಣಗಿದ ಬಟ್ಟೆಯಲ್ಲಿ ಒರೆಸಿ.

ಎರಡು ಬಾಳೆಹಣ್ಣನ್ನು ಕಿವುಚಿ ಪೇಸ್ಟ್ ತಯಾರಿಸಿ. ಕಾಲಿನ ಬೆರಳುಗಳೂ ಸೇರಿದಂತೆ ಸಂಪೂರ್ಣವಾಗಿ ಪೇಸ್ಟ್ ಅನ್ನು ಹಚ್ಚಿ. 20 ನಿಮಿಷಗಳ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆಯಿರಿ.

ಜೇನನ್ನು ಹಿಂಗಾಲಿಗೆ ಸವರಿ ಮಲಗಿ. ಮರುದಿನ ಬೆಳಗ್ಗೆ ಉಗುರು ಬಿಸಿ ನೀರಿನಲ್ಲಿ ಕಾಲನ್ನು ತೊಳೆಯಿರಿ. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಹಿಮ್ಮಡಿಯ ಒಡೆಯುವಿಕೆ ಕಡಿಮೆಯಾಗಿ ಅಕರ್ಷಕ ಹಿಮ್ಮಡಿ ನಿಮ್ಮದಾಗುವುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...