![Mint Masala Soda Recipe / Mint Soda Recipe - Yummy Tummy](https://www.yummytummyaarthi.com/wp-content/uploads/2015/06/1-17.jpg)
ಪುದೀನಾ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಸುಲಭವಾಗಿ ಮಸಾಲ ಸೋಡಾ ಮಾಡಿಕೊಂಡು ಕುಡಿದರೆ ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ.
ಪುದೀನಾ ಎಲೆ – 1/2 ಕಪ್, ಸಕ್ಕರೆ – 4 ಟೇಬಲ್ ಸ್ಪೂನ್, ಚಾಟ್ ಮಸಾಲ – 1.5 ಟೀ ಸ್ಪೂನ್, ಬ್ಲ್ಯಾಕ್ ಸಾಲ್ಟ್ – 1 ಟೀ ಸ್ಪೂನ್, ಲಿಂಬೆಹಣ್ಣಿನ ರಸ – 2 ಟೇಬಲ್ ಸ್ಪೂನ್, ಸೋಡಾ.
ಒಂದು ಮಿಕ್ಸಿ ಜಾರಿಗೆ ಪುದೀನಾ ಸಕ್ಕರೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಒಂದು ಗ್ಲಾಸ್ ತೆಗೆದುಕೊಂಡು ಅದಕ್ಕೆ ಪುದೀನಾ ಮಿಶ್ರಣ ಹಾಕಿ. ನಂತರ ಲಿಂಬೆಹಣ್ಣಿನ ರಸ ಸೇರಿಸಿ. ಅದರ ಮೇಲೆ ಚಾಟ್ ಮಸಾಲ, ಬ್ಲಾಕ್ ಸಾಲ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಸೋಡಾ ಸೇರಿಸಿ ಮಿಕ್ಸ್ ಮಾಡಿ ಸರ್ವ್ ಮಾಡಿ.