ಪಾಯಸ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಹಬ್ಬ ಹರಿದಿನಗಳು ಬಂದಾಗಲೆಲ್ಲಾ ಪಾಯಸ ಮಾಡಿಕೊಂಡು ಸವಿಯುತ್ತಿರುತ್ತೇವೆ. ಒಮ್ಮೆ ಈ ಸೇಬುಹಣ್ಣಿನ ಪಾಯಸ ಮಾಡಿಕೊಂಡು ಸವಿದು ನೋಡಿ ಸಖತ್ ರುಚಿಯಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು:
1 ಸೇಬು ಹಣ್ಣು, 1 ಟೀ ಸ್ಪೂನ್ ತುಪ್ಪ, 3 ಕಪ್- ಹಾಲು, ¼ ಕಪ್-ಕಂಡೆನ್ಸಡ್ ಮಿಲ್ಕ್, 1/4 –ಏಲಕ್ಕಿ ಪುಡಿ, 2 ಟೇಬಲ್ ಸ್ಪೂನ್- ಡ್ರೈ ಫ್ರೂಟ್ಸ್.
ಮಾಡುವ ವಿಧಾನ:
ಮೊದಲಿಗೆ ಸೇಬುಹಣ್ಣಿನ ಸಿಪ್ಪೆ ತೆಗೆದು ತುರಿಯಿರಿ. ನಂತರ ಇದನ್ನು ಒಂದು ಪ್ಯಾನ್ ಗೆ ಹಾಕಿ ಒಂದು ಟೇಬಲ್ ಸ್ಪೂನ್ ತುಪ್ಪ ಹಾಕಿ ಕೈಯಾಡಿಸಿ. ಸೇಬುಹಣ್ಣಿನಲ್ಲಿರುವ ನೀರಿನಂಶ ಕರಗುವವರಗೆ ಹುರಿಯಿರಿ. ನಂತರ ಒಂದು ಬಾಣಲೆಗೆ 3 ಕಪ್ ಹಾಲು ಹಾಕಿ ಕುದಿಸಿ ಅದಕ್ಕೆ ಕಂಡೆನ್ಸಡ್ ಮಿಲ್ಕ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 10 ನಿಮಿಷಗಳ ಕಾಲ ಕುದಿಸಿಕೊಳ್ಳಿ.
ನಂತರ ಏಲಕ್ಕಿ ಪುಡಿ ಸೇರಿಸಿ ಗ್ಯಾಸ್ ಆಫ್ ಮಾಡಿ. ಇದನ್ನು ತಣ್ಣಗಾಗಲು ಬಿಡಿ. ನಂತರ ಬೇಯಿಸಿಟ್ಟುಕೊಂಡ ಸೇಬು ಹಣ್ಣನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಫ್ರಿಡ್ಜ್ ನಲ್ಲಿ ಇಡಿ. ಸರ್ವ್ ಮಾಡುವ ಮೊದಲು ಡ್ರೈ ಫ್ರೂಟ್ಸ್ ಸೇರಿಸಿ.