ಬೇಕಾಗುವ ಪದಾರ್ಥಗಳು :
6 ಮಾಗಿದ ಸೇಬು, ಅರ್ಧ ಕಪ್ ಚೆರ್ರಿ ಹಣ್ಣು – ಮಾರಿ ಬಿಸ್ಕೆಟ್ ಪುಡಿ – ಬೆಣ್ಣೆ – ತುಪ್ಪ, ಅರ್ಧ ಚಮಚ ದಾಲ್ಚಿನ್ನಿ ಪೌಡರ್, 1 ಕಪ್ ಮೊಸರು, ಅರ್ಧ ಚಮಚ ವೆನಿಲಾ ಎಸೆನ್ಸ್- ಬೇಕಿಂಗ್ ಸೋಡಾ, 3 ಚಮಚ ಪುಡಿ ಸಕ್ಕರೆ, 4-5 ದೊಡ್ಡ ಚಮಚ ಜೇನುತುಪ್ಪ, 2 ಕಪ್ ಮೈದಾ, 1 ಮೊಟ್ಟೆ, ತುಸು ಉಪ್ಪು.
ಮಾಡುವ ವಿಧಾನ:
ಮೈದಾಗೆ ಬೇಕಿಂಗ್ ಪೌಡರ್, ಸೋಡಾ, ಉಪ್ಪು ಸೇರಿಸಿ ಜರಡಿಯಾಡಿ. ನಂತರ ಇದಕ್ಕೆ ಒಡೆದು ಗೊಟಾಯಿಸಿದ ಮೊಟ್ಟೆ, ಬೆಣ್ಣೆ ಬೆರೆಸಿ ಮೃದುವಾದ ಪೂರಿ ಹಿಟ್ಟು ಹದಕ್ಕೆ ಕಲಸಿಡಿ. ಇದನ್ನು 1 ತಾಸು ನೆನೆಯಲು ಬಿಟ್ಟು, ತುಪ್ಪ ಬೆರೆಸಿ ನಾದಿಕೊಂಡು ದೊಡ್ಡ ಚಪಾತಿಗಳಾಗಿ ಲಟ್ಟಿಸಿ. ಸೇಬಿನ ಸಿಪ್ಪೆ ಎರೆದು ಹೋಳಾಗಿಸಿ, ಲಘುವಾಗಿ ಬೇಯಿಸಿ, ನಂತರ ಮಸೆದಿಡಿ. ಇದಕ್ಕೆ ಪುಡಿಸಕ್ಕರೆ, ಮಸೆದ ಚೆರ್ರಿ ಹಣ್ಣು ಸೇರಿಸಿ ಮೈಕ್ರೋವೇವ್ ನಲ್ಲಿ 10 ನಿಮಿಷ ಹೈಪರ್ ನಲ್ಲಿ ಬಿಸಿ ಮಾಡಿ, ಹೊರಗೆ ತೆಗೆದು ಆರಲು ಬಿಡಿ.
ಒಂದು ಚಪಾತಿ ಮೇಲೆ ತುಪ್ಪ ಸವರಿಡಿ. ಅದರ ಮೇಲೆ ಬಿಸ್ಕೆಟ್ ಪುಡಿ ಉದುರಿಸಿ. ಇನ್ನೊಂದರ ಮೇಲೆ ಬೆಣ್ಣೆ ಸವರಿ, ಮೊದಲನೆಯದನ್ನು ಕವರ್ ಮಾಡಿ. ಅದರ ಮೇಲೆ ಸೇಬಿನ ಮಿಶ್ರಣ ಹರಡಿರಿ. ಇವನ್ನು ಒಟ್ಟಾಗಿ ರೋಲ್ ಮಾಡಿ, ಸ್ಲೈಸ್ ಮಾಡಿ. ಹೀಗೆ ಎಲ್ಲಾ ಚಪಾತಿಗಳನ್ನು ರೋಲ್ ಮಾಡಿ ಸ್ಲೈಸ್ ಮಾಡಿಕೊಳ್ಳಿ. ಜಿಡ್ಡು ಸವರಿದ ಬೇಕಿಂಗ್ ಟ್ರೇ ನಲ್ಲಿ ಇವನ್ನು ಜೋಡಿಸಿಕೊಂಡು, ಮೊದಲೇ ಪ್ರೀ ಹೀಟ್ ಮಾಡಿದ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ 25 ನಿಮಿಷ ಬೇಕ್ ಮಾಡಿ. ಕಡೆದ ಮೊಸರಿಗೆ ದಾಲ್ಷಿನ್ನಿ, ಎಸೆನ್ಸ್, ಜೇನುತುಪ್ಪ ಬೆರೆಸಿ ಗೊಟಾಯಿಸಿ. ಬೇಕ್ ಗೊಂಡ ಆ್ಯಪಲ್ ಸ್ಟೂಡೆಲ್ಸ್ ನ್ನು ಇದರೊಂದಿಗೆ ಸವಿಯಲು ಕೊಡಿ.