ಈರುಳ್ಳಿ ಆಹಾರ ಬಾಯಿಗೆ ರುಚಿ. ಆದ್ರೆ ಈರುಳ್ಳಿ ಕಟ್ ಮಾಡೋದು ಮಾತ್ರ ಕಷ್ಟದ ಕೆಲಸ. ಕಣ್ಣಲ್ಲಿ ನೀರು ಸುರಿಸುತ್ತಾ ಈರುಳ್ಳಿ ಕಟ್ ಮಾಡುವವರೆಗೆ ಸುಸ್ತಾಗಿ ಬಿಡುತ್ತೆ. ಸಾಕಪ್ಪ ಈ ಈರುಳ್ಳಿ ಸಹವಾಸ ಎನ್ನಿಸುತ್ತೆ. ಆದ್ರೆ ಇನ್ನು ಮುಂದೆ ಈರುಳ್ಳಿ ಕಟ್ ಮಾಡುವಾಗ ಅಳುವ ಅವಶ್ಯಕತೆ ಇಲ್ಲ. ಸುಲಭವಾಗಿ ಈರುಳ್ಳಿ ಕತ್ತರಿಸುವ ಟಿಪ್ಸ್ ಇಲ್ಲಿದೆ.
ಮೊದಲು ಈರುಳ್ಳಿಯನ್ನು ಎರಡು ಭಾಗಗಳನ್ನಾಗಿ ಮಾಡಿ. ಅದನ್ನು ತಣ್ಣನೆಯ ನೀರಿನಲ್ಲಿ ಮುಳುಗಿಸಿಡಿ. ಸ್ವಲ್ಪ ಸಮಯದ ನಂತ್ರ ಸಿಪ್ಪೆ ತೆಗೆದು ಈರುಳ್ಳಿಯನ್ನು ನಿಮಗೆ ಬೇಕಾದ ಗಾತ್ರಕ್ಕೆ ಕತ್ತರಿಸಿ.
ಅಷ್ಟು ಸಮಯವಿಲ್ಲದೆ ಹೋದಲ್ಲಿ, ಮೊದಲು ಕತ್ತರಿಸಿದ ಒಂದು ಭಾಗವನ್ನು ನೀರಿನಲ್ಲಿ ಹಾಕಿ. ಉಳಿದ ಈರುಳ್ಳಿಯನ್ನು ನಂತ್ರ ಕತ್ತರಿಸಿ. ಕಣ್ಣಲ್ಲಿ ನೀರು ಬರುವುದಿಲ್ಲ.
ನೀವು ಈರುಳ್ಳಿ ಕತ್ತರಿಸುವ ಜಾಗದಲ್ಲಿ ಮೇಣದ ಬತ್ತಿ ಅಥವಾ ಲ್ಯಾಂಪ್ ಹಚ್ಚಿಡಿ. ಈರುಳ್ಳಿಯಿಂದ ಹೊರ ಬರುವ ಅನಿಲ ಮೇಣದಬತ್ತಿ ಅಥವಾ ಲ್ಯಾಂಪ್ ಕಡೆ ಹೋಗುವುದರಿಂದ ನೀವು ಆರಾಮವಾಗಿ ಈರುಳ್ಳಿ ಕತ್ತರಿಸಬಹುದು.
ಈರುಳ್ಳಿ ಕತ್ತರಿಸುವಾಗ ಫ್ಯಾನ್ ಬಂದ್ ಮಾಡಿಕೊಳ್ಳಿ.
ಕಟ್ ಮಾಡುವ 15 ನಿಮಿಷ ಮೊದಲು ಈರುಳ್ಳಿಯನ್ನು ಫ್ರೀಜರ್ ನಲ್ಲಿಡಿ.
ಈರುಳ್ಳಿ ಕತ್ತರಿಸುವಾಗ ಬಾಯಿಯಲ್ಲಿ ಚಿಕ್ಕ ಬ್ರೆಡ್ ಇಟ್ಟುಕೊಳ್ಳಿ.
ಈರುಳ್ಳಿ ಕತ್ತರಿಸುವಾಗ ನೀವು ಸೀಟಿ ಕೂಡ ಹೊಡೆಯಬಹುದು. ಹಾಗೆ ಮಾಡಿದರೆ ಈರುಳ್ಳಿಯಿಂದ ಹೊರ ಬರುವ ಅನಿಲ ಕಣ್ಣಿಗೆ ಬರುವುದಿಲ್ಲ.
ಈರುಳ್ಳಿ ಕತ್ತರಿಸುವಾಗ ಮೂಗಿನಲ್ಲಿ ಉಸಿರಾಡುವ ಬದಲು ಬಾಯಿಯಲ್ಲಿ ಉಸಿರಾಡಿ.