alex Certify ಇಲ್ಲಿದೆ ಸಿಹಿ ಕುಂಬಳಕಾಯಿ ‘ಹಲ್ವಾ’ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಸಿಹಿ ಕುಂಬಳಕಾಯಿ ‘ಹಲ್ವಾ’ ಮಾಡುವ ವಿಧಾನ

ಹಲ್ವಾ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಿಹಿ ತಿನ್ನುವ ಆಸೆ ಆಗುತ್ತಿದ್ದರೆ ಒಮ್ಮೆ ಈ ಸಿಹಿ ಕುಂಬಳಕಾಯಿ ಹಲ್ವಾ ಮಾಡಿಕೊಂಡು ಸವಿಯಿರಿ. ಹಾಗೇ ಸಕ್ಕರೆ ಇಷ್ಟಪಡದವರು ಬೆಲ್ಲ ಸೇರಿಸಿಕೊಂಡು ಈ ಹಲ್ವಾ ಮಾಡಿಕೊಂಡು ಸವಿಯಬಹುದು.

ದಪ್ಪ ತಳದ ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ 2 ಟೇಬಲ್ ಸ್ಪೂನ್ ತುಪ್ಪ ಹಾಕಿ. ನಂತರ 5 ಬಾದಾಮಿ ಪೀಸ್, 5 ಗೋಡಂಬಿ ಚೂರುಗಳನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ 3 ಕಪ್ ತುರಿದ ಸಿಹಿ ಕುಂಬಳಕಾಯಿ ತುರಿಯನ್ನು ಹಾಕಿ ಅದರ ಹಸಿವಾಸನೆ ಹೋಗುವವರೆಗೆ ಹುರಿದುಕೊಳ್ಳಿ.

ನಂತರ ಅದಕ್ಕೆ 1 ಕಪ್ ಹಾಲು ಹಾಕಿ ಚೆನ್ನಾಗಿ ಕೈಯಾಡಿಸಿ. ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ 1 ಕಪ್ ಬೆಲ್ಲದ ಪುಡಿಯನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕುಂಬಳಕಾಯಿ ಮಿಶ್ರಣ ತಳ ಬಿಡುವವರಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಚಿಟಿಕೆ ಏಲಕ್ಕಿ ಪುಡಿ ಸೇರಿಸಿ. ನಂತರ ಹುರಿದಿಟ್ಟುಕೊಂಡ ಗೋಡಂಬಿ, ಬಾದಾಮಿ ಹಾಕಿ ಸರ್ವ್ ಮಾಡಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...