ಬೇಕಾಗುವ ಸಾಮಾಗ್ರಿಗಳು:
ಕಾಯಿಹಾಲು-3 ಕಪ್, ಹಾಲು- 3 ಕಪ್, ಸಕ್ಕರೆ- 2 ಕಪ್
ಮಾಡುವ ವಿಧಾನ:
ಒಂದು ದೊಡ್ಡ ತೆಂಗಿನ ಕಾಯಿಯನ್ನು ತೆಗೆದುಕೊಂಡು ತುರಿಯಿರಿ. ಬಳಿಕ 2 ಕಪ್ ನಷ್ಟು ನೀರು ಸೇರಿಸಿ ರುಬ್ಬಿಕೊಂಡು ಹಾಲು ತೆಗೆಯಿರಿ. ಬಳಿಕ ಒಂದು ಪಾತ್ರೆಗೆ 3 ಕಪ್ ಕಾಯಿಹಾಲು ಜೊತೆಗೆ 3 ಕಪ್ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ಕುದಿ ಬಂದಾಗ 2 ಕಪ್ ನಷ್ಟು ಸಕ್ಕರೆ ಸೇರಿ ಮಿಕ್ಸ್ ಮಾಡಿ. ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ.