ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯದಲ್ಲೇ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದು, ಸಚಿವರುಗಳ ಸೇರ್ಪಡೆಗಾಗಿ ಹೈಕಮಾಂಡ್ ಜೊತೆ ಚರ್ಚಿಸಲು ನವದೆಹಲಿಗೆ ತೆರಳಿದ್ದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ನವದೆಹಲಿಯಲ್ಲಿ ನೂತನ ಸಚಿವರ ಸೇರ್ಪಡೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಕೇಂದ್ರ ನಾಯಕರ ಜೊತೆ ನಡೆದ ಸಭೆಯಲ್ಲಿ ಭಾಗವಹಿಸಿದ್ದು, ಸಚಿವರುಗಳ ಹೆಸರುಗಳನ್ನು ಈಗ ಫೈನಲ್ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಂಟು ಮಂದಿ ಸಚಿವರುಗಳು ಈಗಾಗಲೇ ಪ್ರಮಾಣವಚನ ಸ್ವೀಕರಿಸಿದ್ದು, ನಾಳೆ ಮತ್ತೆ 25 ಮಂದಿ ಶಾಸಕರುಗಳು ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆ ಎಂದು ಹೇಳಲಾಗಿದೆ. ಈ ಪೈಕಿ ಹಿರಿಯ ಶಾಸಕರನ್ನು ಹೈಕಮಾಂಡ್ ಆಯ್ಕೆ ಮಾಡಲಿದ್ದು,ಇವರಲ್ಲಿ ಆರ್.ವಿ. ದೇಶಪಾಂಡೆ, ಬಿ.ಕೆ. ಹರಿಪ್ರಸಾದ್, ಟಿ.ಬಿ. ಜಯಚಂದ್ರ, ಹೆಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್ ಮೊದಲಾದವರ ಹೆಸರಿದೆ ಎನ್ನಲಾಗಿದೆ.
ಇನ್ನುಳಿದಂತೆ ಸಿದ್ದರಾಮಯ್ಯ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಸಂಭಾವ್ಯ ಸಚಿವರುಗಳ ಪಟ್ಟಿ ಇಂತಿದೆ.
ಚೆಲುವರಾಯಸ್ವಾಮಿ (ನಾಗಮಂಗಲ)
ಲಕ್ಷ್ಮಿ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮಂತರ)
ಶಿವನಗೌಡ ಪಾಟೀಲ್ (ಬಸವನಬಾಗೇವಾಡಿ)
ಈಶ್ವರ್ ಖಂಡ್ರೆ (ಬಾಲ್ಕಿ)
ಶರಣ ಪ್ರಕಾಶ್ ಪಾಟೀಲ್ (ಸೇಡಂ)
ಶರಣಬಸಪ್ಪ ದರ್ಶನಾಪುರ್ (ಶಹಾಪುರ್)
ಬಸವರಾಜ ರಾಯರೆಡ್ಡಿ (ಯಲಬುರ್ಗಾ)
ಕೆ ವೆಂಕಟೇಶ್ (ಪಿರಿಯಾಪಟ್ಟಣ)
ಡಾ. ಎಂ ಸಿ ಸುಧಾಕರ್ (ಚಿಂತಾಮಣಿ)
ಕೃಷ್ಣ ಬೈರೇಗೌಡ (ಬ್ಯಾಟರಾಯನಪುರ)
ರಹೀಮ್ ಖಾನ್ (ಬೀದರ್ ಉತ್ತರ)
ಶಿವರಾಜ್ ತಂಗಡಗಿ (ಕನಕಗಿರಿ)
ಬಿ. ನಾಗೇಂದ್ರ (ಬಳ್ಳಾರಿ ಗ್ರಾಮಾಂತರ)
ರುದ್ರಪ್ಪ ಲಮಾಣಿ (ಹಾವೇರಿ)
ಹೆಚ್.ಸಿ. ಮಹದೇವಪ್ಪ (ಟಿ ನರಸೀಪುರ)