ಪ್ರಕೃತಿಯ ನಿಯಮಗಳಿಗೆ ಸವಾಲು ಹಾಕುವ ಅನೇಕ ವಿಶಿಷ್ಟ ಜೀವಿಗಳು ಈ ಜಗತ್ತಿನಲ್ಲಿವೆ. ಅವುಗಳಲ್ಲೊಂದು ಪ್ಲಾಟಿಪಸ್ ಎಂಬ ಪ್ರಾಣಿ. ಈ ಜೀವಿ ನೋಡಲು ತುಂಬಾ ವಿಚಿತ್ರವಾಗಿದೆ. ಇದರ ಬಾಯಿಯ ಭಾಗ ಬಾತುಕೋಳಿಯಂತಿದ್ದು ದೇಹದ ಉಳಿದ ಭಾಗ ಸೀಲ್ ಮೀನಿನಂತಿದೆ. ಇದು ಸಸ್ತನಿ ಜೀವಿ. ಸಸ್ತನಿಯಾಗಿದ್ದರೂ ಈ ಪ್ರಾಣಿ ಮೊಟ್ಟೆಯನ್ನಿಡುತ್ತದೆ, ಹಾಲು ಕೂಡ ನೀಡುತ್ತವೆ ಎಂಬುದು ಅಚ್ಚರಿಯ ಸಂಗತಿ.
ವಿಜ್ಞಾನಿಗಳು ಅದೊಂದು ಜೀವಂತ ಜೀವಿ ಎಂದು ಒಪ್ಪಿಕೊಂಡಿರಲಿಲ್ಲ. 1799 ರಲ್ಲಿ ಮೊದಲ ಬಾರಿಗೆ ಈ ಪ್ಲಾಟಿಪಸ್‌ನ ಪಳೆಯುಳಿಕೆಯನ್ನು ಕಂಡುಕೊಂಡಾಗ ಅಚ್ಚರಿಗೊಳಗಾಗಿದ್ದರು. ಈ ಪಳೆಯುಳಿಕೆಯ ದೇಹವು ಬೀವರ್‌ನಂತೆ ಮತ್ತು ಅದರ ಬಾಯಿ ಬಾತುಕೋಳಿಯಂತೆ ಇತ್ತು. ಈ ಭೂಮಿಯ ಮೇಲೆ ಅಂತಹ ಜೀವಿ ಇಲ್ಲ ಎಂದು ವಿಜ್ಞಾನಿಗಳು ಹೇಳಿದ್ದರು. ಆ ಸಮಯದಲ್ಲಿ ವಿಜ್ಞಾನಿಗಳು ಇದು ಎರಡು ವಿಭಿನ್ನ ಜೀವಿಗಳ ದೇಹ ಎಂದು ಭಾವಿಸಿದ್ದರು. ಆದರೆ ಅದರ ಬಗ್ಗೆ ಸಂಶೋಧನೆ ನಡೆಸಿದಾಗ ಅದು ಒಂದೇ ಜೀವಿ ಎಂದು ದೃಢಪಟ್ಟಿದೆ.
ಇದು ಇಡೀ ಭೂಮಿಯ ಮೇಲಿನ ಐದು ಜೀವಿಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಸಂಯೋಜನೆಯಾಗಿದೆ. ಪ್ಲಾಟಿಪಸ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ವಿಷವನ್ನು ಬಳಸುವ ವಿಶ್ವದ ವಿಶಿಷ್ಟ ಜೀವಿಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ಈ ಪ್ರಾಣಿಯ ಹಿಮ್ಮಡಿಯಲ್ಲಿ ವಿಷವನ್ನು ಒಳಗೊಂಡಿರುವ ಮುಳ್ಳು ಇದೆ. ತನ್ನನ್ನು ರಕ್ಷಿಸಿಕೊಳ್ಳಲು, ಪ್ಲಾಟಿಪಸ್ ತನ್ನ ಶತ್ರುವಿನ ದೇಹಕ್ಕೆ ಈ ಮುಳ್ಳನ್ನು ಸೇರಿಸುತ್ತದೆ. ಆದರೆ, ಈ ಮುಳ್ಳು ತಗುಲಿದರೆ ಸಾಯುವುದಿಲ್ಲ. ಆದರೆ ಸಹಿಸಲಾರದಷ್ಟು ನೋವು ಇರುತ್ತದೆ.