ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬುದು ನಿಮಗೆ ತಿಳಿದೇ ಇದೆ. ಇಂತಹ ಬಿಲಿಯನೇರ್ ಮಸ್ಕ್ ಅವರ ಬಂಗಲೆ ಹೇಗಿರಬಹುದು ಅನ್ನೋ ಕುತೂಹಲ ನಿಮಗಿದ್ದೇ ಇರುತ್ತದೆ. ಆದರೆ, ವಿಶ್ವದ ಟಾಪ್-1 ಶ್ರೀಮಂತ ಎಲೋನ್ ಮಸ್ಕ್ ಗೆ ಇರಲು ಸ್ವಂತ ಸೂರಿಲ್ಲ ಎಂಬುದು ನಿಮಗೆ ಗೊತ್ತೇ..?
ಹೌದು, ಬಿಲಿಯನೇರ್ ಎಲೋನ್ ಮಸ್ಕ್ ಸ್ವಂತ ಮನೆಯನ್ನೇ ಹೊಂದಿಲ್ಲ. ಇವರು ಸ್ನೇಹಿತರ ಮನೆಯಲ್ಲಿ ಮಲಗುತ್ತಾರಂತೆ. ಆಶ್ಚರ್ಯ ಆದ್ರೂ ಸತ್ಯ. ಈ ವಿಚಾರವನ್ನು ಖುದ್ದು ಎಲೋನ್ ಮಸ್ಕ್ ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಅಷ್ಟೇ ಅಲ್ಲ, ಶ್ರೀಮಂತರಾದವರು ಹೆಚ್ಚಾಗಿ ವಿಹಾರ ನೌಕೆಯನ್ನು ಹೊಂದಿರುತ್ತಾರೆ. ಈ ನೌಕೆಗಳಲ್ಲಿ ಅವರು ತಮ್ಮ ರಜಾ ಮಜಾವನ್ನು ಅನುಭವಿಸುತ್ತಾರೆ. ಆದರೆ, ಎಲೋನ್ ಮಸ್ಕ್ ಬಳಿ ವಿಹಾರ ನೌಕೆ ಕೂಡ ಇಲ್ಲ. ಅಲ್ಲದೆ ಅವರು ಒಂದೇ ಒಂದು ದಿನ ರಜೆಯನ್ನು ಕೂಡ ತೆಗೆದುಕೊಳ್ಳುವುದಿಲ್ಲವಂತೆ.
ಅಂದಹಾಗೆ, ಎಲೋನ್ ಮಸ್ಕ್ ತಮ್ಮದೇ ಆದ ಖಾಸಗಿ ವಿಮಾನವನ್ನು ಹೊಂದಿದ್ದಾರೆ. ವಿಮಾನವನ್ನು ಮಸ್ಕ್ ಬಳಸದಿರುವುದಕ್ಕೆ ತನಗೆ ಕೆಲಸ ಮಾಡಲು ಸಮಯ ಸಾಕಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಎಲೋನ್ ಮಸ್ಕ್ ಟ್ವಿಟ್ಟರ್ ಸಂಸ್ಥೆಯನ್ನು ಖರೀದಿಸುವ ವಿಚಾರವಾಗಿ ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಟ್ವಿಟ್ಟರ್‌ನಲ್ಲಿ ಅವರು 9.1 ಶೇ. ಪಾಲನ್ನು ಹೊಂದಿದ್ದಾರೆ. ಹಾಗೂ ಸಾಮಾಜಿಕ ಮಾಧ್ಯಮ ಕಂಪನಿಯ ಎರಡನೇ ಅತಿದೊಡ್ಡ ಷೇರುದಾರರಾಗಿದ್ದಾರೆ.