ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ತಿಂಡಿ ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್.
ಬಟಾಣಿ, ಆಲೂಗಡ್ಡೆ ಸ್ಯಾಂಡ್ವಿಚ್ ಗೆ ಬೇಕಾಗುವ ಪದಾರ್ಥ :
ಬಟಾಣಿ : 1 ಕಪ್ (ಬೇಯಿಸಿದ್ದು)
ಆಲೂಗಡ್ಡೆ : 3 ( ಬೇಯಿಸಿದ್ದು)
ಹಸಿರು ಮೆಣಸಿನಕಾಯಿ : 3 (ಸಣ್ಣದಾಗಿ ಕೊಚ್ಚಿದ್ದು)
ಕೊತ್ತಂಬರಿ ಪುಡಿ : 1/4 ಟೀ ಚಮಚ
ಕೆಂಪು ಮೆಣಸಿನ ಪುಡಿ : 1/4 ಟೀ ಚಮಚ
ಆಲಿವ್ ಎಣ್ಣೆ : 2 ಟೀ ಚಮಚ
ಬ್ರೆಡ್ : 6 ತುಂಡುಗಳು
ಬೆಣ್ಣೆ ಅಗತ್ಯಕ್ಕೆ ತಕ್ಕಷ್ಟು
ರುಚಿಗೆ ಉಪ್ಪು
ಬಟಾಣಿ, ಆಲೂಗಡ್ಡೆ ಸ್ಯಾಡ್ವಿಂಚ್ ಮಾಡುವ ವಿಧಾನ:
ಒಂದು ಪ್ಯಾನ್ ಗೆ ಆಲಿವ್ ಎಣ್ಣೆ, ಹಸಿರು ಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿ. ಇದಕ್ಕೆ ಕಿಚುಕಿದ ಆಲೂಗಡ್ಡೆಯನ್ನು ಹಾಕಿ ಮಿಕ್ಸ್ ಮಾಡಿ. ನಂತ್ರ ಬೇಯಿಸಿದ ಬಟಾಣಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಗೂ ಉಪ್ಪನ್ನು ಹಾಕಿ. ಎಲ್ಲವನ್ನೂ ಸರಿಯಾಗಿ ಮಿಕ್ಸ್ ಮಾಡಿ. ನಂತ್ರ ಗ್ಯಾಸ್ ಬಂದ್ ಮಾಡಿ ಮಿಶ್ರಣವನ್ನು ಬದಿಗಿಡಿ.
ಬ್ರೆಡ್ ನ ಎರಡು ತುಂಡುಗಳನ್ನು ತೆಗೆದುಕೊಂಡು ಎಲ್ಲ ಬ್ರೆಡ್ ಗೂ ಬೆಣ್ಣೆ ಹಚ್ಚಿ. ನಂತ್ರ ಮಿಶ್ರಣವನ್ನು ಉಂಡೆ ಮಾಡಿ ಒಂದು ಬ್ರೆಡ್ ತುಂಡಿನ ಮೇಲಿಟ್ಟು ಇನ್ನೊಂದು ಬ್ರೆಡ್ ತುಂಡನ್ನು ಮುಚ್ಚಿ. ಪ್ಯಾನ್ ಬಿಸಿ ಮಾಡಿ, ಅದ್ರ ಮೇಲೆ ಬ್ರೆಡ್ ಇಡಿ. ಎರಡೂ ಕಡೆ ಬ್ರೆಡ್ ಬೆಂದ ನಂತ್ರ ತೆಗೆಯಿರಿ.