ಸ್ಯಾಂಡ್ ವಿಚ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಂಜೆ ಸಮಯದಲ್ಲಿ ಕರಿದ ಪದಾರ್ಥಗಳನ್ನು ತಿನ್ನುವ ಬದಲು ಮೊಸರು ಸೇರಿಸಿ ಮಾಡುವ ಈ ಸ್ಯಾಂಡ್ ವಿಚ್ ಮಾಡಿಕೊಂಡು ತಿಂದರೆ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
2 ಕಪ್-ಗ್ರೀಕ್ ಯೋಗಾರ್ಟ್, ¼ ಕಪ್ ಮಯೋನಿಸ್, 1 ಟೇಬಲ್ ಸ್ಪೂನ್-ಕಾರ್ನ್, ¼ ಟೀ ಸ್ಪೂನ್ ಕಾಳುಮೆಣಸಿನ ಪುಡಿ, ¼ ಟೀ ಸ್ಪೂನ್-ಉಪ್ಪು, 6-ಬ್ರೌನ್ ಬ್ರೆಡ್ ಪೀಸ್, 1 ಟೇಬಲ್ ಸ್ಪೂನ್- ತುರಿದ ಕ್ಯಾರೆಟ್.
ಮಾಡುವ ವಿಧಾನ:
ಯೋಗಾರ್ಟ್ ಗೆ ಮಯೋನಿಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದಕ್ಕೆ ಕ್ಯಾರೆಟ್ ತುರಿ, ಕಾರ್ನ್, ಕಾಳುಮೆಣಸಿನ ಪುಡಿ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಬ್ರೆಡ್ ಪೀಸ್ ತೆಗೆದುಕೊಂಡು ಅದಕ್ಕೆ ಮಾಡಿಟ್ಟುಕೊಂಡ ಮೊಸರಿನ ಮಿಶ್ರಣವನ್ನು ಸ್ವಲ್ಪ ಹಾಕಿ ಅದರ ಮೇಲೆ ಇನ್ನೊಂದು ಬ್ರೆಡ್ ಪೀಸ್ ಇಟ್ಟು ನಿಧಾನಕ್ಕೆ ಒತ್ತಿ. ಅರ್ಧ ಭಾಗ ಕತ್ತರಿಸಿ ಸರ್ವ್ ಮಾಡಿ.