ಮನೆಯಲ್ಲಿ ಸಾಂಬಾರು ಮಾಡುವುದಕ್ಕೆ ತರಕಾರಿ ಇಲ್ಲದೇ ಇದ್ದಾಗ ಬೆಳ್ಳುಳ್ಳಿ ಬಳಸಿ ರುಚಿಕರವಾದ ತಂಬುಳ್ಳಿ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು.
ಬೇಕಾಗುವ ಪದಾರ್ಥ :
6-7 ಎಸಳು – ಬೆಳ್ಳುಳ್ಳಿ, 1 ಕಪ್ – ಮೊಸರು, 3 ಟೀ ಸ್ಪೂನ್ – ನೀರು, 1 ಟೀ ಸ್ಪೂನ್ – ತುಪ್ಪ, ½ ಟೀ ಸ್ಪೂನ್ – ಸಾಸಿವೆ, ½ ಟೀ ಸ್ಪೂನ್ – ಜೀರಿಗೆ, 2 – ಒಣ ಮೆಣಸು, 4 ಎಸಳು – ಕರಿಬೇವು, ಚಿಟಿಕೆ – ಇಂಗು, ಉಪ್ಪು – ರುಚಿಗೆ ತಕ್ಕಷ್ಟು.
ಮಾಡುವ ವಿಧಾನ :
ಮೊದಲಿಗೆ ಒಂದು ಬೌಲ್ ಗೆ ಮೊಸರು, ನೀರು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬೆಳ್ಳುಳ್ಳಿಯನ್ನು ಚಿಕ್ಕ ಪೀಸ್ ಮಾಡಿಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ. ನಂತರ ಸಾಸಿವೆ, ಜೀರಿಗೆ, ಇಂಗು, ಕರಿಬೇವು, ಒಣಮೆಣಸು ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡು ಅದನ್ನು ಮೊಸರಿನ ಮಿಶ್ರಣಕ್ಕೆ ಹಾಕಿ. ಬಿಸಿ ಅನ್ನದ ಜತೆ ಸರ್ವ್ ಮಾಡಿ.