1 ಕಪ್ ರವಾ ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ನಂತರ ಇದಕ್ಕೆ 1 ಕಪ್ ಮೊಸರು ಸೇರಿಸಿ. ನಂತರ ಇದಕ್ಕೆ ½ ಟೀ ಸ್ಪೂನ್ ಸಕ್ಕರೆ, 1 ಟೀ ಸ್ಪೂನ್ ಶುಂಠಿ, 1 ಟೀ ಸ್ಪೂನ್ ಹಸಿ ಮೆಣಸಿನಕಾಯಿ ಪೇಸ್ಟ್, ಎಣ್ಣೆ 2 ಟೀ ಸ್ಪೂನ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬೇಕಿದ್ದರೆ ಮೊಸರು ಕೂಡ ಸೇರಿಸಿ. 30 ನಿಮಿಷಗಳ ಕಾಲ ಇದನ್ನು ಹಾಗೆಯೇ ಇಟ್ಟುಬಿಡಿ.
ನಂತರ ಇದಕ್ಕೆ ನೀರು ಸೇರಿಸಿ. ಇಡ್ಲಿ ಹಿಟ್ಟಿನ ಹದಕ್ಕೆ ಬರಲಿ ಇದು. ನಂತರ ಇದಕ್ಕೆ 1 ಟೀ ಸ್ಪೂನ್ ಈನೋ ಫ್ರೂಟ್ ಸಾಲ್ಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದನ್ನು ಒಂದು ಎಣ್ಣೆ ಸವರಿದ ಪಾತ್ರೆಗೆ ಹಾಕಿಕೊಂಡು ಆವಿಯಲ್ಲಿ 10 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಿ.
ನಂತರ ಒಂದು ಒಗ್ಗರಣೆ ಪಾತ್ರೆಗೆ 2 ಟೀ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ½ ಟೀ ಸ್ಪೂನ್ ಸಾಸಿವೆ, ಎಳ್ಳು, ಜೀರಿಗೆ, ಚಿಟಿಕೆ ಇಂಗು, 5 ಎಸಳು ಕರಿಬೇವು, 2 ಹಸಿಮೆಣಸು ಕತ್ತರಿಸಿಕೊಂಡು ಹಾಕಿ. ಇದನ್ನು ದೋಕ್ಲಾ ಮೇಲುಗಡೆ ಹಾಕಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಕತ್ತರಿಸಿಕೊಳ್ಳಿ.