alex Certify ಇಲ್ಲಿದೆ ರಣಬೀರ್‌ – ಆಲಿಯಾ ಮದುವೆ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್‌ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ರಣಬೀರ್‌ – ಆಲಿಯಾ ಮದುವೆ ಬಗ್ಗೆ ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್‌ ಸಂಗತಿ

ರಣಬೀರ್‌ ಹಾಗೂ ಆಲಿಯಾ ಭಟ್‌ ಈಗ ಮಿಸ್ಟರ್‌ & ಮಿಸೆಸ್‌ ಕಪೂರ್‌ ಆಗಿ ಬಡ್ತಿ ಪಡೆದಿದ್ದಾರೆ. 5 ವರ್ಷಗಳಿಂದ ಪ್ರೀತಿಸ್ತಾ ಇದ್ದ ಈ ಜೋಡಿ ನಿನ್ನೆ ಹಸೆಮಣೆ ಏರಿದೆ. ಬಾಂದ್ರಾದಲ್ಲಿರೋ ರಣಬೀರ್‌ ನಿವಾಸ ʼವಾಸ್ತುʼವಿನಲ್ಲಿ ಮದುವೆ ನೆರವೇರಿದೆ. ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಮಾತ್ರ ಈ ವಿವಾಹಕ್ಕೆ ಸಾಕ್ಷಿಯಾಗಿದ್ದರು.

ಈ ಮದುವೆ ಬಗ್ಗೆ ಇಂಟ್ರೆಸ್ಟಿಂಗ್‌ ಸಂಗತಿಯೊಂದನ್ನು ಆಲಿಯಾ ಸಹೋದರ ರಾಹುಲ್‌ ಭಟ್‌ ಬಿಚ್ಚಿಟ್ಟಿದ್ದಾರೆ. ಮದುವೆಯಲ್ಲಿ ರಣಬೀರ್‌ ಹಾಗೂ ಆಲಿಯಾ ಸಪ್ತಪದಿ ತುಳಿದಿಲ್ಲವಂತೆ. ಅಗ್ನಿಸಾಕ್ಷಿಯಾಗಿ ಕೇವಲ 4 ಹೆಜ್ಜೆ ಮಾತ್ರ ನಡೆದಿದ್ದಾರೆ. ಬಹಳ ವರ್ಷಗಳಿಂದ ಕಪೂರ್‌ ಕುಟುಂಬದ ಕಾರ್ಯಕ್ರಮಗಳನ್ನು ನಡೆಸಿಕೊಡ್ತಾ ಇದ್ದ ಪುರೋಹಿತರೇ ಆಲಿಯಾ – ರಣಬೀರ್‌ ಮದುವೆಯನ್ನೂ ನೆರವೇರಿಸಿದ್ದಾರಂತೆ.

ರಣಬೀರ್‌, ಆಲಿಯಾ ಸಪ್ತಪದಿ ತುಳಿಯಲು ಆರಂಭಿಸಿದಾಗ ಪ್ರತಿ ಹೆಜ್ಜೆಯ ಮಹತ್ವವನ್ನೂ ಪುರೋಹಿತರು ಮನಮುಟ್ಟುವಂತೆ ವಿವರಿಸಿದ್ದಾರೆ. ಇದನ್ನು ಆಲಿಸಿದ ರಣಬೀರ್‌ ಹಾಗೂ ಆಲಿಯಾ ಜೋಡಿ, ಸಪ್ತಪದಿಯ ನಾಲ್ಕು ಹೆಜ್ಜೆ ಮಾತ್ರ ಹಾಕಿದ್ದಾರೆ. ಈ ವಿಚಾರವನ್ನು ಖುದ್ದು ರಾಹುಲ್‌ ಭಟ್‌ ವಿವರಿಸಿದ್ದಾರೆ.

ವಾಸ್ತು ನಿವಾಸದಲ್ಲಿ ಈ ಜೋಡಿ ಸಪ್ತಪದಿ ತುಳಿಯುತ್ತಿರುವ ವಿಡಿಯೋ ಕೂಡ ಇಂಟರ್ನೆಟ್‌ನಲ್ಲಿ ಹರಿದಾಡ್ತಾ ಇದೆ. ಮದುವೆಯ ಫೋಟೋಗಳನ್ನು ಆಲಿಯಾ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಸರ್ವಾಲಂಕಾರಗೊಂಡಿದ್ದ ಮನೆಯಲ್ಲಿ ರಣಬೀರ್‌ – ಆಲಿಯಾರ ಅದ್ಧೂರಿ ವಿವಾಹ ಮಹೋತ್ಸವ ಥೇಟ್‌ ಸಿನೆಮಾದಂತೆಯೇ ಭಾಸವಾಗುತ್ತಿತ್ತು.

ಮನೆಯ ಬಾಲ್ಕನಿಯೇ ಕಳೆದ 5 ವರ್ಷಗಳಿಂದ ಅವರ ಫೇವರಿಟ್‌ ಸ್ಪಾಟ್‌ ಆಗಿತ್ತಂತೆ. ಅದೇ ಜಾಗದಲ್ಲೇ ಮದುವೆ ಆಗಿರೋದಾಗಿ ಆಲಿಯಾ ಪೋಸ್ಟ್‌ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...