ಮುಟ್ಟಿನ ಸಮಯದಲ್ಲಿ ಸಹಿಸಲು ಅಸಾಧ್ಯವಾದ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಶಮನಕ್ಕೆ ಮಾತ್ರೆ ಸೇವಿಸುವುದು ಆರೋಗ್ಯಕರವಲ್ಲ. ಬದಲಿಗೆ ಯಾವುದೇ ಅಡ್ಡ ಪರಿಣಾಮವಿಲ್ಲದ ಈ ನೈಸರ್ಗಿಕ ವಿಧಾನ ಪಾಲಿಸಿದರೆ ನೋವು ಕಡಿಮೆಯಾಗುವುದು ಖಂಡಿತ.
ಸಾಸಿವೆ ಎಣ್ಣೆಯ ಮಸಾಜ್
ಸ್ವಲ್ಪ ಸಾಸಿವೆ ಎಣ್ಣೆ ತೆಗೆದು ಅದರಿಂದ ಕಿಬ್ಬೊಟ್ಟೆಗೆ ಮಸಾಜ್ ಮಾಡಿದರೆ ಹೊಟ್ಟೆನೋವು ಕಡಿಮೆಯಾಗುತ್ತದೆ.
ಮೆಂತೆ
ಮುಟ್ಟಿನ ನೋವಿಗೆ ಮೆಂತೆ ರಾಮಬಾಣ. ಮುಟ್ಟು ಆಗುವ 2-3 ದಿನವೇ ಮೆಂತೆಯನ್ನು ಸ್ವಲ್ಪ ಬೆಲ್ಲದ ಜೊತೆ ತಿಂದರೆ ತುಂಬಾ ಒಳ್ಳೆಯದು. ಮುಟ್ಟಿನ ಸಮಯದಲ್ಲಿ ನೀರಿಗೆ ಸ್ವಲ್ಪ ಮೆಂತೆ ಹಾಕಿ ಕುದಿಸಿ ಕುಡಿದರೆ ನೋವು ಕಡಿಮೆಯಾಗುತ್ತದೆ.
ಜೀರಿಗೆ
ಮುಟ್ಟಿನ ಸಮಯದಲ್ಲಿ ಜೀರಿಗೆ ನೀರು ಮಾಡಿ ಕುಡಿದರೆ ನೋವು ಬೇಗನೆ ಕಡಿಮೆಯಾಗುತ್ತದೆ.
ಹಾಟ್ ಬ್ಯಾಗ್
ಹಾಟ್ ಬ್ಯಾಗ್ ಇಡುವುದರಿಂದ ನೋವು ಕಡಿಮೆಯಾಗಿ ರಿಲ್ಯಾಕ್ಸ್ ಅನಿಸುತ್ತದೆ.
ವ್ಯಾಯಾಮ
ಶವಾಸನ ಹಾಗೂ ಪ್ರಾಣಾಯಾಮ ಕೂಡ ಮುಟ್ಟಿನ ನೋವು ಕಡಿಮೆ ಮಾಡುವಲ್ಲಿ ಸಹಕಾರಿ.
ಶುಂಠಿ ಮತ್ತು ಬ್ಲ್ಯಾಕ್ ಟೀ
ಬ್ಲ್ಯಾಕ್ ಟೀಗೆ ಸ್ವಲ್ಪ ಶುಂಠಿ ಹಾಕಿ ಕುಡಿಯುವುದರಿಂದ ಕಿಬ್ಬೊಟ್ಟೆಯ ಸೆಳೆತ ಕಡಿಮೆಯಾಗುತ್ತದೆ.
ಎಳನೀರು
ಮುಟ್ಟಿನ ಸಮಯದಲ್ಲಿ ಎಳನೀರು ಕುಡಿದರೆ ನೋವು ಕಡಿಮೆಯಾಗುತ್ತದೆ.