ಲಸ್ಸಿ ಪಂಜಾಬ್ ನಲ್ಲಿ ಹೆಚ್ಚು ಪ್ರಸಿದ್ಧವಾದ ಪಾನೀಯ. ಇದನ್ನು ಮಾಡುವುದು ಕೂಡ ತುಂಬಾ ಸುಲಭ. ಹಾಗೇ ಕುಡಿಯುವುದಕ್ಕೂ ಚೆನ್ನಾಗಿರುತ್ತದೆ. ಮಾವಿನಹಣ್ಣಿನಿಂದ ಸುಲಭವಾಗಿ ಲಸ್ಸಿ ಮಾಡುವ ವಿಧಾನ ಇಲ್ಲಿದೆ ನೋಡಿ.
1 ½ ಕಪ್ ತಾಜಾ ಮಾವಿನಹಣ್ಣು, 2 ಕಪ್- ಮೊಸರು, 4 ಟೇಬಲ್ ಸ್ಪೂನ್-ತಾಜಾ ಕ್ರೀಂ, ಸಕ್ಕರೆ-ರುಚಿಗೆ ತಕ್ಕಷ್ಟು.
ಮೊದಲಿಗೆ ಮಾವಿನಹಣ್ಣುಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಮಾವಿನಹಣ್ಣನ್ನು ಕತ್ತರಿಸಿಕೊಳ್ಳಿ. ಒಂದು ಮಿಕ್ಸಿ ಜಾರಿಗೆ ಇದನ್ನು ಹಾಕಿ ಅದಕ್ಕೆ ಸಕ್ಕರೆ ಸೇರಿಸಿ ರುಬ್ಬಿಕೊಳ್ಳಿ.
ನಂತರ ಮೊಸರು, ಕ್ರೀಂ, ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ಮತ್ತೊಮ್ಮೆ ರುಬ್ಬಿಕೊಂಡು ಸರ್ವ್ ಮಾಡಿ. ಸಕ್ಕರೆ ಇಷ್ಟಪಡದವರು ಕೊಕೋನಟ್ ಶುಗರ್ ಸೇರಿಸಬಹುದು. ಹಾಗೇ ಕೋಲ್ಡ್ ಇಷ್ಟಪಡುವವರು ಐಸ್ ಕ್ಯೂಬ್ ಸೇರಿಸಬಹುದು.