ಮೂತ್ರದ ಸೋಂಕು ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ. 100 ರಲ್ಲಿ 80 ಮಂದಿ ಮೂತ್ರದ ಸೋಂಕಿಗೆ ಒಳಗಾಗ್ತಿದ್ದಾರೆ. ಮೂತ್ರವನ್ನು ಬಹಳ ಹೊತ್ತು ಕಟ್ಟಿಕೊಂಡಿದ್ದರೆ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇದು ಮೂತ್ರಕೋಶದ ಸೋಂಕಿಗೆ ಕಾರಣವಾಗುತ್ತದೆ. ಇದರಿಂದ ಗರ್ಭಧಾರಣೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ.
ಮೂತ್ರ ಕೋಶದ ಸೋಂಕಿಗೆ ವಯಸ್ಸಿನ ಮಿತಿಯಿಲ್ಲ. ಎಲ್ಲ ವಯಸ್ಸಿನಲ್ಲಿಯೂ ಇದು ಕಾಡುತ್ತದೆ. ಮೂತ್ರವನ್ನು ಹೆಚ್ಚು ಕಾಲ ಕಟ್ಟಿದ್ರೆ ಸೋಂಕಿಗೆ ಕಾರಣವಾಗುತ್ತದೆ. ಮೂತ್ರ ವಿಸರ್ಜನೆ ಮಾಡುವಾಗ ಉರಿ, ತುರಿಕೆ ಸೇರಿದಂತೆ ಕೆಲ ಸಮಸ್ಯೆಗಳು ಕಾಡುತ್ತವೆ. ದಿನ ಕಳೆದಂತೆ ಸಮಸ್ಯೆ ಉಲ್ಬಣಿಸುತ್ತದೆ.
ಮಸಾಲೆ ಪದಾರ್ಥ, ಕರಿದ ತಿಂಡಿಯನ್ನು ಹೆಚ್ಚು ಸೇವನೆ ಮಾಡುವವರಲ್ಲಿ ಮೂತ್ರದ ಸೋಂಕು ಹೆಚ್ಚಾಗಿ ಕಾಡುತ್ತದೆ.
ಅನಾರೋಗ್ಯದ ಕಾರಣ ಹೆಚ್ಚೆಚ್ಚು ಮಾತ್ರೆ ಸೇವನೆ ಮಾಡುವ ಮಹಿಳೆಯರಲ್ಲೂ ಇದು ಕಾಡುತ್ತದೆ. ಕಲುಷಿತ ನೀರು ಸೇವನೆ ಕೂಡ ಮೂತ್ರ ಕೋಶದ ಸೋಂಕಿಗೆ ಕಾರಣವಾಗುತ್ತದೆ.
ಕೊಳಕು ಶೌಚಾಲಯ ಬಳಸುವುದು ಮೂತ್ರಕೋಶದ ಸೋಂಕಿಗೆ ದಾರಿ ಮಾಡಿಕೊಡುತ್ತದೆ. ಟಾಯ್ಲೆಟ್ ಸೀಟಿನಲ್ಲಿರುವ ಕೊಳಕು, ಬ್ಯಾಕ್ಟೀರಿಯಾ ಮೂತ್ರಕೋಶ ಸೇರಿ ಸಮಸ್ಯೆ ತಂದೊಡ್ಡುತ್ತದೆ.
ಸೆಕ್ಸ್ ನಂತ್ರ ಖಾಸಗಿ ಅಂಗವನ್ನು ಸ್ವಚ್ಛಗೊಳಿಸದೆ ನಿರ್ಲಕ್ಷ್ಯ ಮಾಡಿದ್ರೆ ಕೂಡ ಸಮಸ್ಯೆ ಕಾಡುತ್ತದೆ.
ಕಿಡ್ನಿಯಲ್ಲಿ ಕಲ್ಲಿದ್ದರೆ ಮತ್ತು ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದರೆ ಕೂಡ ಮೂತ್ರಕೋಶದಲ್ಲಿ ಸೋಂಕಾಗುತ್ತದೆ.
ಮೂತ್ರ ಮಾಡುವಾಗ ಉರಿ, ತುರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ಬೆನ್ನು ನೋವು, ಹೊಟ್ಟೆ ನೋವು, ಹಸಿವಾಗದಿರುವುದು, ಸುಸ್ತು, ಮೂತ್ರದ ಬಣ್ಣ ಹಳದಿಯಾಗುವುದು ಇವೆಲ್ಲವೂ ಮೂತ್ರಕೋಶದ ಸೋಂಕಿನ ಲಕ್ಷಣಗಳು. ಮೂತ್ರವನ್ನು ಪರೀಕ್ಷೆ ಮಾಡಿ ತಕ್ಷಣ ವೈದ್ಯರ ಭೇಟಿ ಮಾಡುವುದು ಸೂಕ್ತ.
ಕೆಲವೊಂದು ಮನೆ ಮದ್ದುಗಳು ಇದರ ನಿಯಂತ್ರಣಕ್ಕೆ ನೆರವಾಗುತ್ತವೆ.
ಗೋಮುಖಾಸನ ಯೋಗದ ಮೂಲಕ ಮೂತ್ರದ ಸೋಂಕನ್ನು ಕಡಿಮೆ ಮಾಡಿಕೊಳ್ಳಬಹುದು/ ಮಹಿಳೆಯರು ಸುಲಭವಾಗಿ ಮಾಡಬಹುದಾದ ಯೋಗ ಇದು.
ಪ್ರತಿ ದಿನ ಒಂದು ಗ್ಲಾಸ್ ಕ್ರ್ಯಾನ್ಬೆರಿ ರಸವನ್ನು ಕುಡಿಯಬೇಕು. ನಾಲ್ಕೈದು ದಿನ ಕ್ರ್ಯಾನ್ಬೆರಿ ರಸ ಕುಡಿಯುತ್ತಿದ್ದಂತೆ ಅದ್ರ ಪರಿಣಾಮ ನಿಮಗೆ ಗೊತ್ತಾಗುತ್ತದೆ.
ಬೆಚ್ಚಗಿನ ನೀರಿನಲ್ಲಿ ಖಾಸಗಿ ಅಂಗವನ್ನು ಸ್ವಚ್ಚಗೊಳಿಸಬೇಕು.
ಬೆಳ್ಳುಳ್ಳಿ ಬ್ಯಾಕ್ಟಿರಿಯಾ ಹೊಡೆದೋಡಿಸುವ ಶಕ್ತಿ ಹೊಂದಿದೆ. ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡಿದ್ರೆ ಮೂತ್ರಕೋಶದ ಸೋಂಕು ಕಡಿಮೆಯಾಗುತ್ತದೆ.
ಒಂದು ಲೋಟ ನೀರಿಗೆ ಒಂದು ಚಮಚ ಸೇಬು ವಿನೆಗರ್ ಮಿಕ್ಸ್ ಮಾಡಿ ಸೇವನೆ ಮಾಡಬಹುದು.
ಮಜ್ಜಿಗೆ ಕೂಡ ಮೂತ್ರಕೋಶದ ಸೋಂಕು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಪ್ರತಿ ದಿನ ಒಂದು ಗ್ಲಾಸ್ ಮಜ್ಜಿಗೆ ಸೇವನೆ ಮಾಡಬೇಕು.
ಒಂದು ಗ್ಲಾಸ್ ಅಕ್ಕಿ ನೀರಿಗೆ ಸಕ್ಕರೆ ಬೆರೆಸಿ ಕುಡಿದ್ರೆ ಮೂತ್ರಕೋಶದ ಸೋಂಕು ಕಡಿಮೆಯಾಗುತ್ತದೆ.