ರಸಂ ಮಾಡಿದಾಗ ಬೇರೆ ಏನಾದರೂ ಸೈಡ್ ಡಿಶ್ ಇದ್ದಾಗ ಊಟ ಮತ್ತಷ್ಟೂ ಚೆನ್ನಾಗಿರುತ್ತದೆ ಅಲ್ವಾ…? ಮನೆಯಲ್ಲಿ ಮಶ್ರೂಮ್ ತಂದಿದ್ದು, ಇದ್ದರೆ ಸುಲಭವಾಗಿ ಮಾಡಿ ಮಶ್ರೂಮ್ ಪೆಪ್ಪರ್ ಫ್ರೈ.
ಬೇಕಾಗುವ ಸಾಮಾಗ್ರಿಗಳು:
ಮಶ್ರೂಮ್ 20, ಈರುಳ್ಳಿ – 1 ಸಣ್ಣಗೆ ಕತ್ತರಿಸಿಕೊಳ್ಳಿ, ಬೆಳ್ಳುಳ್ಳಿ – 8 ಎಸಳು, ಕಾಳುಮೆಣಸು – 2 ಟೀ ಸ್ಪೂನ್, ಮೆಂತೆಕಾಳು – 1 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ನೀರು – ಅಗತ್ಯವಿರುವಷ್ಟು, ಎಣ್ಣೆ – 3 ಟೇಬಲ್ ಸ್ಪೂನ್, ಸಾಸಿವೆ – 1/2 ಟೀ ಸ್ಪೂನ್, ಜೀರಿಗೆ – 1ಟೀ ಸ್ಪೂನ್, ಕರಿಬೇವು – ಸ್ವಲ್ಪ.
ಮಾಡುವ ವಿಧಾನ:
ಮೊದಲಿಗೆ ಮಶ್ರೂಮ್ ಅನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಿ. ನಂತರ ಒಂದು ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಹಾಕಿ ನಂತರ ಈರುಳ್ಳಿ, ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಈರುಳ್ಳಿ ಸ್ವಲ್ಪ ಕೆಂಪಗಾಗುತ್ತಿದ್ದಂತೆ ಮಶ್ರೂಮ್ ಹಾಕಿ ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಮೆಂತೆಕಾಳು, ಕಾಳುಮೆಣಸನ್ನು ತರಿತರಿಯಾಗಿ ಪುಡಿ ಮಾಡಿಕೊಂಡು ಅದನ್ನು ಮಶ್ರೂಮ್ ಗೆ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಬಿಸಿ ಅನ್ನದ ಜತೆ ಸರ್ವ್ ಮಾಡಿ.