ಈ ಬಾರಿ ಮುಂಗಾರು ರಾಜ್ಯಕ್ಕೆ ಸಕಾಲಕ್ಕೆ ಆಗಮಿಸಿದರೂ ಸಹ ವ್ಯಾಪಕ ಮಳೆಯಾಗಿರಲಿಲ್ಲ. ಆದರೆ ನಂತರ ಮಳೆ ಬಿರುಸುಗೊಂಡಿದ್ದು, ಇದರಿಂದ ಜನ, ಜಾನುವಾರುಗಳ ಸಾವು ಸಂಭವಿಸಿದ್ದಲ್ಲದೆ ಬೆಳೆ ಹಾನಿ ಜೊತೆಗೆ ಆಸ್ತಿಪಾಸ್ತಿಯ ನಷ್ಟ ಸಹ ಆಗಿದೆ. ಇದರ ವಿವರ ಇಲ್ಲಿದೆ.
ಜೂನ್ 1ರಿಂದ ಆಗಸ್ಟ್ 6 ರವರೆಗೆ ಮಳೆಯ ಕಾರಣಕ್ಕೆ ರಾಜ್ಯದಲ್ಲಿ 70 ಮಂದಿ ಸಾವನ್ನಪ್ಪಿದ್ದು, 507 ಜಾನುವಾರುಗಳು ಪ್ರಾಣ ತೆತ್ತಿವೆ. 3,559 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, 17,212 ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ಅಲ್ಲದೆ 1,29,087 ಹೆಕ್ಟೇರ್ ಕೃಷಿ ಬೆಳೆ ಹಾನಿಗೊಳಗಾಗಿದ್ದು, 7,942 ಉತ್ತರ ಪ್ರದೇಶದ ತೋಟಗಾರಿಕೆ ಬೆಳೆ ಕೂಡಾ ಹಾಳಾಗಿದೆ. ಮಳೆಯ ಕಾರಣಕ್ಕೆ 3,162 ಕಿಲೋಮೀಟರ್ ರಸ್ತೆ ಹಾಗೂ 8,445 ಕಿಲೋಮೀಟರ್ ಗ್ರಾಮೀಣ ಪ್ರದೇಶದ ರಸ್ತೆ ಹಾಳಾಗಿದೆ ಎಂದು ಮೂಲಗಳು ತಿಳಿಸಿವೆ.